• 19 March 2019 05:28
Jai Kannada
Jai Kannada
Blog single photo
February 20, 2019

4 ವಾರಗಳಲ್ಲಿ  453 ಕೋಟಿ ಪಾವತಿ ಮಾಡಿ, ಇಲ್ಲದಿದ್ದರೆ ಜೈಲಿಗೆ ಹೋಗಿ ಅನಿಲ್ ಅಂಬಾನಿಗೆ ಸುಪ್ರೀಂಕೋರ್ಟ್ ಸೂಚನೆ  


 ನವದೆಹಲಿ: ಉದ್ಯಮಿ ಅನಿಲ್ ಅಂಬಾನಿ ಅವರು ನ್ಯಾಯಾಲಯ ನಿಂದನೆ ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ಸುಪ್ರೀಂಕೋರ್ಟ್ ತೀರ್ಮಾನಿಸಿರುವುದರಿಂದ ಭಾರೀ ಹಿನ್ನಡೆಯಾಗಿದೆ. ರಿಲಯನ್ಸ್ ಎರಿಕ್ಸನ್ ಕಂಪನಿಗೆ ನೀಡಿದ್ದ ಭರವಸೆ ಸುಳ್ಳಾಗಿದೆ. ಎರಿಕ್ಸನ್ ಕಂಪನಿಗೆ ರಿಲಯನ್ಸ್ ಉದ್ದೇಶಪೂರ್ವಕವಾಗಿ ಹಣ ನೀಡಿಲ್ಲ ಎಂದು ಸುಪ್ರೀಂಕೋರ್ಟ್ ಆರೋಪಿಸಿದೆ.

ಎರಿಕ್ಸನ್ ಕಂಪನಿಗೆ 453 ಕೋಟಿ ರೂ.ಗಳನ್ನು ಬಡ್ಡಿಸಮೇತ ನಾಲ್ಕು ವಾರಗಳಲ್ಲಿ ಪಾವತಿ ಮಾಡಿ ಇಲ್ಲದಿದ್ದರೆ ಜೈಲಿಗೆ ಹೋಗಿ ಎಂದು ಸುಪ್ರೀಂಕೋರ್ಟ್ ರಿಲಯನ್ಸ್ ಕಮ್ಯುನಿಕೇಷನ್ಸ್ ಕಂಪನಿಗೆ ಸೂಚನೆ ನೀಡಿದ್ದಾರೆ.

ನಾಲ್ಕು ವಾರಗಳಲ್ಲಿ ಹಣ ಪಾವತಿಗೆ ವಿಫಲರಾದರೆ ಮೂರು ತಿಂಗಳ ಜೈಲು ವಾಸ ಮತ್ತು ಹೆಚ್ಚುವರಿ ಒಂದು ಕೋಟಿ ದಂಡವನ್ನು ಪಾವತಿ ಮಾಡಬೇಕೆಂದು ಕೋರ್ಟ್ ತಿಳಿಸಿದೆ.

Recent Comments

Leave Comments

footer
Top