• 23 September 2019 04:51
Jai Kannada
Jai Kannada
Blog single photo
February 17, 2019

ರಾವಲ್ಪಿಂಡಿ ಆಸ್ಪತ್ರೆಯಿಂದಲೇ ಸಿಆರ್‌ಪಿಎಫ್ ಪಡೆಗಳ ಮೇಲೆ ದಾಳಿಗೆ ಮಸೂದ್ ಅಜರ್ ಸೂಚನೆ 

ಕರಾಚಿ: ಜೈಷೆ ಎ ಮೊಹ್ಮದ್ ಮುಖ್ಯಸ್ಥ ಮಸೂದ್ ಅಜರ್‌ಗೆ ಒಸಾಮಾ ಬಿನ್ ಲಾಡೆನ್ ಮಾದರಿಯಲ್ಲಿ ಪಾಕಿಸ್ತಾನ ಸೆಕ್ಯೂರಿಟಿ ನೀಡಿದೆಯೆಂಬ ಮಾಹಿತಿ ಲಭ್ಯವಾಗಿದೆ. ಮಸೂದ್ ಅಜರ್ ಪಾಕ್ ಸೇನೆಯ ರಾವಲ್ಪಿಂಡಿ ಆಸ್ಪತ್ರೆಯಿಂದಲೇ ಭಾರತದ ಸಿಆರ್‌ಪಿಎಫ್ ಪಡೆಗಳ ಮೇಲೆ  ದಾಳಿಗೆ ಸೂಚನೆ ನೀಡಿದ್ದನೆಂದು ಹೇಳಲಾಗುತ್ತಿದೆ. ಕಳೆದ 4 ತಿಂಗಳಿಂದ ಮಾರಣಾಂತಿಕ ಕಾಯಿಲೆಗೆ ಅಜರ್ ಚಿಕಿತ್ಸೆ ಪಡೆಯುತ್ತಿದ್ದಾನೆ. 

 ಪುಲ್ವಾಮಾ ದಾಳಿಗೆ 8 ದಿನಗಳ ಮುಂಚೆ ಅಜರ್ ಸೋದರ ಸಂಬಂಧಿ ಉಸ್ಮಾನ್ ಭದ್ರತಾ ಪಡೆಗಳ ಗುಂಡಿನ ದಾಳಿಗೆ ಮೃತಪಟ್ಟಿದ್ದ. ಅವನ ಸಾವಿಗೆ ಸೇಡು ತೀರಿಸಿಕೊಳ್ಳುವಂತೆ ಅಜರ್ ಆಡಿಯೊ ಸಂದೇಶ ಕಳಿಸಿದ್ದು ಅವನ ಧ್ವನಿ ತುಂಬಾ ಕ್ಷೀಣವಾಗಿತ್ತು. ನಮ್ಮನ್ನು ಭಯೋತ್ಪಾದಕರು, ಶಾಂತಿ ಭಂಗ ಮಾಡುವವರು. ಮಾನಸಿಕ ವಿಕಲ್ಪರು ಎಂದು ಕರೆಯಬಹುದು. ಆದರೆ ನಾವು ಯಾವುದೇ ಕಾರಣಕ್ಕೂ ಸೇಡು ತೀರಿಸಿಕೊಳ್ಳದೇ ಬಿಡಬಾರದು

ಈ ಯುದ್ಧದಲ್ಲಿ ಸಾವಿಗಿಂತ ಹೆಚ್ಚು ಸಂತೋಷಕರವಾದುದು ಯಾವುದೂ ಇಲ್ಲ ಎಂದು ಆಡಿಯೊದಲ್ಲಿ ಅಜರ್ ಹೇಳುವುದು ಕೇಳಿಸಿದೆ. ಅಜರ್ ಗೌಪ್ಯವಾಗಿ ತನ್ನ ಸೋದರಸಂಬಂಧಿಗಳಾದ ಮೊಹಮ್ದ್ ಉಮರ್ ಮತ್ತು ಅಬ್ದುಲ್ ರಶೀದ್ ಗಾಝಿಯನ್ನು ಈ ಆಡಿಯೊ ಟೇಪ್ ಬಳಸಿಕೊಂಡು ಕಣಿವೆಯ ಯುವಕರ ಬ್ರೈನ್ ವಾಷ್ ಮಾಡಿ ಐಇಡಿ ಸ್ಫೋಟಕಗಳ ಮೂಲಕ ಪಿದಾಯೀನ್ ದಾಳಿ ಮಾಡುವಂತೆ ಸೂಚಿಸಿದ್ದನೆಂಬ ಸಂಗತಿ ಬಯಲಾಗಿದೆ.

Recent Comments

Leave Comments

footer
Top