• 19 April 2019 20:32
Jai Kannada
Jai Kannada
Blog single photo
February 17, 2019

ಮಿರ್ವೈಜ್ ಉಮರ್ ಸೇರಿ  ಐವರು ಪ್ರತ್ಯೇಕತಾವಾದಿಗಳ ಭದ್ರತೆ ವಾಪಸ್ 

ಕಾಶ್ಮೀರ : ಮಿರ್ವೈಜ್ ಉಮರ್ ಫಾರೂಕ್ ಸೇರಿದಂತೆ ಐವರು ಪ್ರತ್ಯೇಕತಾವಾದಿಗಳಿಗೆ ನೀಡಿದ್ದ ಭದ್ರತೆಯನ್ನು ವಾಪಸ್ ಪಡೆಯುವ ಮೂಲಕ ಭಾರತ ಹುರಿಯತ್ ನಾಯಕರಿಗೆ ಬಿಸಿ ಮುಟ್ಟಿಸಿದೆ.

ಭಾರತದ ನೆಲದಲ್ಲೇ ಇದ್ದು, ಭಾರತ ಸರ್ಕಾರದ ಭದ್ರತೆಯಲ್ಲಿ ಬದುಕುತ್ತಿರುವ ಪ್ರತ್ಯೇಕತಾವಾದಿಗಳು ಪಾಕಿಸ್ತಾನ ಮತ್ತು ಐಎಸ್‌ಐ ಸಂಸ್ಥೆಗಳಿಂದ ಹಣಕಾಸು ನೆರವು ಪಡೆಯುತ್ತಿರಬಹುದೆಂದು ಶಂಕಿಸಲಾಗಿದೆ.

ಈ ಹಣವನ್ನು ಜಮ್ಮುಕಾಶ್ಮೀರದಲ್ಲಿ ಕಾಶ್ಮೀರ ಪ್ರತ್ಯೇಕತಾವಾದದ ಹೋರಾಟಕ್ಕೆ ಇವರು ಬಳಸುತ್ತಿರಬಹುದೆಂದು ಶಂಕಿಸಲಾಗಿದೆ.  ಮಿರ್ವೈಜ್ ಅಲ್ಲದೇ ಅಬ್ದುಲ್ ಘನಿ ಬಟ್, ಬಿಲಾಲ್ ಲೋನ್, ಹಶೀಮ್ ಖುರೇಷಿ ಮತ್ತು ಶಬೀರ್ ಶಾಹ್ ಅವರಿಗೆ ನೀಡಿದ್ದ ಭದ್ರತೆಯನ್ನು ವಾಪಸ್ ಪಡೆಯಲಾಗಿದೆ.

Recent Comments

Leave Comments

footer
Top