• 19 April 2019 20:12
Jai Kannada
Jai Kannada
Blog single photo
February 17, 2019

ಸೂರಜ್ ಶೆಟ್ಟಿ ನಿರ್ದೇಶನದ ತುಳು ಚಿತ್ರದಲ್ಲಿ ಅನಂತನಾಗ್ 

ಮಂಗಳೂರು: ಹಿರಿಯ ನಟ ಅನಂತ ನಾಗ್ ಸೂರಜ್ ಶೆಟ್ಟಿ ನಿರ್ದೇಶನದ 'ಇಂಗ್ಲಿಷ್' ಎಂಬ ತುಳು ಚಿತ್ರದಲ್ಲಿ ನಟಿಸುವ ಮೂಲಕ ತುಳು ಚಿತ್ರೋದ್ಯೋಮಕ್ಕೆ ಚೊಚ್ಚಲ ಪ್ರವೇಶ ಮಾಡಿದ್ದಾರೆ. ಲಕ್ಷ್ಮಿ ಸ್ಮಾರಕ ಕಾಲೇಜಿನಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಅನಂತನಾಗ್,  ನಾನು ತುಳು ಚಿತ್ರದಲ್ಲಿ ನಟಿಸಲು ಬಯಸಿದ್ದರೂ ಅವಕಾಶ ಸಿಕ್ಕಿರಲಿಲ್ಲ. ಆದರೆ ಹರೀಶ್ ಶೇರಿಗಾರ್ ಮತ್ತು ನಿರ್ದೇಶಕ ಸೂರಜ್ ಶೆಟ್ಟಿ ಮೂಲಕ ಅವಕಾಶ ಸಿಗುತ್ತಿದೆ ಎಂದರು.

.ಉಡುಪಿಯಲ್ಲಿ ಕೆಲವು ವರ್ಷಗಳು ವಿದ್ಯಾಭ್ಯಾಸ ಮಾಡಿದ್ದರೂ ತುಳು ಭಾಷೆಯಲ್ಲಿ ಅಷ್ಟೊಂದು ನಿರರ್ಗಳವಾಗಿ ಮಾತನಾಡಲು ಬರುವುದಿಲ್ಲ. ನಾನು ತುಳು ಭಾಷೆ ಕಲಿಯುತ್ತಿದ್ದು, ಚಿತ್ರದ ಚಿತ್ರಕಥೆ ಓದುತ್ತಿದ್ದು, ಪಾತ್ರಕ್ಕೆ ನ್ಯಾಯ ಒದಗಿಸುವ ಭರವಸೆಯಿದೆ ಎಂದಿದ್ದಾರೆ. ನಾನು ಚಿತ್ರದಲ್ಲಿ  ಬೋಧಕನ ಪಾತ್ರವನ್ನು ಮಾಡುತ್ತಿರುವುದಾಗಿ ತಿಳಿಸಿದರು.

Recent Comments

Leave Comments

footer
Top