• 19 April 2019 20:01
Jai Kannada
Jai Kannada
Blog single photo
February 17, 2019

ನಿಷೇಧಿತ ಔಷಧಿ ಸಾಗಣೆಯಿಂದ ಕುವೈಟ್‌ನಲ್ಲಿ   ಜೈಲು: ಪರಿಹಾರಕ್ಕೆ ಒತ್ತಾಯ 

ಉಡುಪಿ:  2018ರ ಮೇನಲ್ಲಿ ನಿಷೇಧಿತ ಔಷಧಿಯನ್ನು ಒಯ್ದ ಆರೋಪದ ಮೇಲೆ ಕುವೈಟ್‌ನಲ್ಲಿ ಜೈಲು ಶಿಕ್ಷೆಗೊಳಗಾದ ಬಸ್ರೂರಿನ ಶಂಕರ ಪೂಜಾರಿ ತನಗೆ ನಿಷೇಧಿತ ಮಾತ್ರೆಗಳನ್ನು ನೀಡಿದ ಮುಬಾರಕ್ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. ಮುಬಾರಕ್ ನಿಷೇಧಿತ ಮಾತ್ರಗಳನ್ನು ನೀಡಿ ಅದನ್ನು ಕುವೈತಿನಲ್ಲಿರುವ ಅವನ ಅತ್ತೆ ತಸ್ಲೀಮಾಗೆ ನೀಡುವಂತೆ ಶಂಕರ ಪೂಜಾರಿಗೆ ತಿಳಿಸಿದ್ದ.  ,

ಬ್ರಹ್ಮಗಿರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪೂಜಾರಿ ತಾನು ಕುವೈಟಿನ ಕೃಷಿ ಮತ್ತು ಆಹಾರೋತ್ಪನ್ನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ನಿಷೇಧಿತ ಔಷಧಿ ಸಾಗಣೆ ಮಾಡಿದ್ದಕ್ಕಾಗಿ ಕೆಲಸ ಕಳೆದುಕೊಂಡೆ ಮತ್ತು ಏಳು ತಿಂಗಳ ಕಾಲ ಜೈಲುವಾಸ ಅನುಭವಿಸಿದ್ದಾಗಿ ಹೇಳಿದ್ದಾನೆ. 
ಮುಬಾರಕ್ ಕಾರಣದಿಂದ ನಾನು ಕೆಲಸ ಕಳೆದುಕೊಂಡೆ ಮತ್ತು ಜೈಲುವಾಸ ಅನುಭವಿಸಿದೆ. ಆದ್ದರಿಂದ ಮುಬಾರಕ್ ಪರಿಹಾರವಾಗಿ ಏಳು ತಿಂಗಳ ಸಂಬಳವನ್ನು ನನಗೆ ನೀಡಬೇಕು ಎಂದು ಪೂಜಾರಿ ಆಗ್ರಹಿಸಿದರು.

ನಾನು ವಿವಿಧ ಸಂಘಟನೆಗಳ ಮೂಲಕ ನನ್ನ ಬಿಡುಗಡೆಗೆ ಸುಮಾರು 6 ಲಕ್ಷ ರೂ.ಗಳನ್ನು ಖರ್ಚು ಮಾಡಿದೆ. ಈಗ ಹೊಸದಾಗಿ ಜೀವನ ನಡೆಸಿ ನನ್ನ ಕುಟುಂಬವನ್ನು ಸಲಹುವ ನಿರೀಕ್ಷೆಯಲ್ಲಿದ್ದೇನೆ ಎಂದಿದ್ದಾರೆ.

Recent Comments

Leave Comments

footer
Top