• 19 April 2019 20:43
Jai Kannada
Jai Kannada
Blog single photo
February 17, 2019

ಪ್ರಜ್ಞೆತಪ್ಪಿದ ಮಹಿಳೆಯನ್ನು ತಿಂದುಹಾಕಿದ ಹಂದಿಗಳು 

ಮಾಸ್ಕೊ: ರಷ್ಯಾದ ಮಹಿಳೆಯೊಬ್ಬಳು ಹಂದಿ ಗೂಡಿನಲ್ಲಿ ಪ್ರಜ್ಞೆ ತಪ್ಪಿಬಿದ್ದಾಗ ಅವಳನ್ನು ಸಜೀವವಾಗಿ ಹಂದಿಗಳು ತಿಂದುಹಾಕಿದ ಭಯಾನಕ ಘಟನೆ  ಸಂಭವಿಸಿದೆ. ಹಂದಿ ಗೂಡಿನಲ್ಲಿದ್ದ ರಷ್ಯಾ ಮಹಿಳೆ ಪಾರ್ಶ್ವವಾಯು ಪೀಡಿತಳಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಗ ಹಂದಿಗಳು ದಾಳಿ ಮಾಡಿದ್ದವು.  ಅವಳ ಮುಖ, ಭುಜಗಳು,ಕಿವಿಗಳಲ್ಲಿ ಕಚ್ಚಿದ ಗಾಯಗಳಾಗಿದ್ದು, ಅಪಾರ ಪ್ರಮಾಣದ ರಕ್ತಸ್ರಾವವಾಗಿತ್ತು.

ಪಶ್ಚಿಮ ರಷ್ಯಾ ಉಡುಮುರ್ಟಿಯಾ ಜಿಲ್ಲೆಯ ಮಾಲೋಪುರ್ಗಿನ್‌ಸ್ಕಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ತೋಟದಲ್ಲಿ ಮಹಿಳೆ ಸತ್ತುಬಿದ್ದಿರುವುದನ್ನು ಅವಳ ಪತಿ ಗಮನಿಸಿದ್ದ. ಪತಿ ಅನಾರೋಗ್ಯದಲ್ಲಿ ರಾತ್ರಿ ಬೇಗ ಮಲಗಿ ಬೆಳಿಗ್ಗೆ ಪತ್ನಿಯನ್ನು ಹುಡುಕಿಕೊಂಡು ತೋಟಕ್ಕೆ ಬಂದಿದ್ದ. ನೆಲದ ಮೇಲೆ ಚಲನರಹಿತವಾಗಿ ಮಲಗಿದ್ದ ಪತ್ನಿಯನ್ನು ಹಂದಿಗಳು ಸಂಪೂರ್ಣವಾಗಿ ಅವಳ ಮುಖ ಮತ್ತು ಇತರೆ ಅಂಗಾಂಗಗಳನ್ನು ತಿಂದುಹಾಕಿದ್ದು ಕಂಡುಬಂತು.

ಇಂತಹ ಆಘಾತಕಾರಿ ಘಟನೆ ಎಂದೂ ವರದಿಯಾಗಿಲ್ಲ. ಗೂಡಿನಲ್ಲಿ ಎಷ್ಟು ಹಂದಿಗಳಿದ್ದವೆಂದು ಗೊತ್ತಾಗಿಲ್ಲ.ವಿಧಿವಿಜ್ಞಾನ ತಜ್ಞರ ನೆರವು ಪಡೆಯಲಾಗಿದ್ದು. ಏನಾಯಿತು ಎಂಬ ಬಗ್ಗೆ ಎಲ್ಲಾ ಸಂದರ್ಭಗಳನ್ನು ಮತ್ತು ಕಾರಣಗಳನ್ನು ಸ್ಥಿರಪಡಿಸಲಿದ್ದಾರೆಂದು ವಕ್ತಾರ ಹೇಳಿದರು.
2012ರಲ್ಲಿ ಕೂಡ ಇದೇ ರೀತಿಯ ಘಟನೆ ನಡೆದಿದ್ದು, ಒರೆಗಾನ್ ರೈತನನ್ನು ಹಂದಿಗಳು ತಿಂದುಹಾಕಿದ್ದವು.

ಸಾಕು ಹಂದಿಗಳು ಅಷ್ಟೊಂದು ಆಕ್ರಮಣಕಾರಿ ಆಗಿರದಿದ್ದರೂ ಕೆಲವು ಅಪಾಯಕಾರಿಯಾಗಿರುತ್ತವೆ ಎಂದು ಹೇಳಲಾಗುತ್ತಿದೆ. ಇವು 113ರಿಂದ 136 ಕೆಜಿ ತೂಕವಿರುತ್ತವೆ.

Recent Comments

Leave Comments

footer
Top