• 19 April 2019 20:33
Jai Kannada
Jai Kannada
Blog single photo
February 17, 2019

ಪುಲ್ವಾಮಾ ದಾಳಿಗೆ ''ಹೌ ಈಸ್ ದಿ ಜೈಷ್'' ಎಂದು ಕೇಳಿದ ವಿದ್ಯಾರ್ಥಿಯ ಅಮಾನತು

ದೆಹಲಿ: ಆಲಿಗಢ್ ಮುಸ್ಲಿಮ ವಿವಿಯ ವಿದ್ಯಾರ್ಥಿಯೊಬ್ಬ ಪುಲ್ವಾಮಾ ದಾಳಿಯ ಬಗ್ಗೆ ಕೆಟ್ಟ ಅಭಿರುಚಿಯ ಟ್ವೀಟ್ ಮಾಡಿದ ಬಗ್ಗೆ ಎಫ್‌ಐಆರ್ ದಾಖಲು ಮಾಡಲಾಗಿದ್ದು, ವಿವಿ ಕೂಡ ಅವನನ್ನು ಅಮಾನತುಗೊಳಿಸಿದೆ. ಜೈಷ್ ಇ ಮೊಹ್ಮದ್ ಆತ್ಮಾಹುತಿ ಬಾಂಬರ್ ಪುಲ್ವಾಮಾದಲ್ಲಿ ಯೋಧರ ಬಸ್ ಸ್ಫೋಟಿಸಿ 40 ಯೋಧರು ಹುತಾತ್ಮರಾದ ಘಟನೆ ಬಗ್ಗೆ ವಿಶ್ವಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.

ಆದರೆ ಕೆಲವರು ಈ ದಾಳಿ ವಾಸ್ತವವಾಗಿ ಸಂಭ್ರಮಾಚರಣೆಗೆ ಯೋಗ್ಯವೆಂದು ಭಾವಿಸಿ ಟ್ವೀಟ್ ಮಾಡಿದ್ದಾರೆ. ಇಂತಹ ಟ್ವೀಟ್ ಮಾಡಿದವರಲ್ಲಿ ಎಎಂಯುನ ಬಸೀಮ್ ಹಲೀಲ್ ಒಬ್ಬ. ವಿವಿಯ ಗಣಿತ ವಿದ್ಯಾರ್ಥಿಯಾಗಿದ್ದ ರಿಲಾಲ್, ಹೌ ಈಸ್ ದಿ ಜೈಷ್ ? ಗ್ರೇಟ್ ಸರ್ ಎಂದು ಟ್ವೀಟ್ ಮಾಡಿದ್ದರು.

ಇತ್ತೀಚೆಗೆ ಉರಿ ದಿ ಸರ್ಜಿಕಲ್ ಸ್ಟ್ರೈಕ್ ಚಲನಚಿತ್ರದಲ್ಲಿ ಹೌ ಈಸ್ ದಿ ಜೋಷ್' ಎಂದು ಸೇನಾಧಿಕಾರಿ ಕೇಳಿದ್ದರು. ಅವರ ಹೇಳಿಕೆಗೆ ಪ್ರತಿಯಾಗಿ ಹಿಲಾಲ್ 'ಹೌ ಈಸ್ ದಿ ಜೈಷ್ ಎಂದು ತಿರುಗೇಟು ನೀಡಿದ್ದ.

Recent Comments

Leave Comments

footer
Top