• 19 April 2019 20:04
Jai Kannada
Jai Kannada
Blog single photo
February 17, 2019

ಕೃಷಿ ಹೊಂಡದಲ್ಲಿ ಬಾಲಕಿಯ ಮೃತದೇಹ: ಅತ್ಯಾಚಾರ, ಕೊಲೆಯ ಶಂಕೆ

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 15 ವರ್ಷ ವಯಸ್ಸಿನ ಅಮೃತವರ್ಷಿಣಿ ಎಂಬ ಬಾಲಕಿಯ ಮೃತದೇಹ ತುಮ್ಮನಹಳ್ಳಿ ಹೊರವಲಯದ  ಕೃಷಿಹೊಂಡವೊಂದರಲ್ಲಿ ಪತ್ತೆಯಾಗಿದೆ.

ಫೆ. 15ರಿಂದ ಅಮೃತವರ್ಷಿಣಿ ಕಾಣೆಯಾಗಿದ್ದರಿಂದ ಅವಳ ಪೋಷಕರು ತುಮ್ಮನಹಳ್ಳಿ ಮುನಿರಾಜು ಎಂಬುವನ ವಿರುದ್ಧ ಅಪಹರಣದ ಆರೋಪ ಮಾಡಿ ಅವಳ ಪೋಷಕರು ದೂರು ನೀಡಿದ್ದರು.

ಮೃತದೇಹದಲ್ಲಿ ಗಾಯದ ಗುರುತುಗಳಿದ್ದು ಅತ್ಯಾಚಾರ ಮಾಡಿದ ಬಳಿಕ ಹತ್ಯೆ ಮಾಡಿ ಶವವನ್ನು ಕೃಷಿ ಹೊಂಡದಲ್ಲಿ ಎಸೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Recent Comments

Leave Comments

footer
Top