• 19 April 2019 20:01
Jai Kannada
Jai Kannada
Blog single photo
February 17, 2019

ಹುತಾತ್ಮ ಯೋಧರ ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊತ್ತ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ 

ಪುಲ್ವಾಮಾದಲ್ಲಿ ಮೃತಪಟ್ಟ ಯೋಧರ ಕುಟುಂಬಕ್ಕಾಗಿ ಮಾಜಿ ಕ್ರಿಕೆಟ್ ಆಟಗಾರ ವೀರೇಂದ್ರ ಸೆಹ್ವಾಗ್ ಹೃದಯ ಮಿಡಿದಿದೆ. ಹುತಾತ್ಮರ ಯೋಧರ ಬಲಿದಾನ ನೆನೆದು ಜನರು ಅಮರ್ ರಹೇ ಅಮರ್ ರಹೇ ಎಂದು ಘೋಷಣೆ ಮೊಳಗಿಸುತ್ತಿರುವಾಗ, ವೀರ ಯೋಧರ ಕುಟುಂಬದ ಮಕ್ಕಳ ವಿದ್ಯಾಭ್ಯಾಸದ ಹೊಣೆಯನ್ನು ಹೊರುವುದಾಗಿ ಸೆಹ್ವಾಗ್ ಪ್ರಕಟಿಸುವ ಮೂಲಕ ಸಹೃದಯತೆ ಮೆರೆದಿದ್ದಾರೆ.

ತಮ್ಮದೇ ಹೆಸರಿನ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಹುತಾತ್ಮ ಯೋಧರ ಕುಟುಂಬದ ವಿದ್ಯಾಭ್ಯಾಸದ ಹೊಣೆ ಹೊತ್ತಿದ್ದಾರೆ. ಹರ್ಯಾಣದಲ್ಲಿ ಸೆಹ್ವಾಗ್ ಅಂತಾರಾಷ್ಟ್ರೀಯ ಶಾಲೆ ಸಾಕಷ್ಟು ಹೆಸರು ಮಾಡಿದ್ದು ಇದೀಗ ವೀರ ಯೋಧರ ಮಕ್ಕಳಿಗೆ ತಮ್ಮದೇ ಶಾಲೆಯಲ್ಲಿ ಉಚಿತ ಶಿಕ್ಷಣ ಕೊಡುವ ಭರವಸೆ ನೀಡಿದ್ದಾರೆ.

ಯೋಧರ ಕುಟುಂಬಗಳ ನೆರವಿಗೆ ಎಷ್ಟು ಸಹಾಯ ಮಾಡಿದರೂ ಅದು ಕಡಿಮೆಯಲ್ಲ. ಆದರೆ ನಾನು ಮಾಡುವ ಕನಿಷ್ಠ ನೆರವು ಏನೆಂದರೆ ದಿಟ್ಟ ಸಿಆರ್‌ಪಿಎಫ್ ಹುತಾತ್ಮ ಯೋಧರ ಮಕ್ಕಳ ಶಿಕ್ಷಣದ ಸಂಪೂರ್ಣ ಹೊಣೆಯನ್ನು ನನ್ನ ಸೆಹ್ವಾಗ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಹೊತ್ತುಕೊಳ್ಳುವೆ ಎಂದು ಸೆಹ್ವಾಗ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Recent Comments

Leave Comments

footer
Top