• 23 September 2019 04:50
Jai Kannada
Jai Kannada
Blog single photo
February 17, 2019

 ಕಾರು ಅಪಘಾತದಲ್ಲಿ ಶಬರಿಮಲೈ ಯಾತ್ರೆಗೆ ತೆರಳುತ್ತಿದ್ದ ಇಬ್ಬರ ಸಾವು 

ಬೆಂಗಳೂರು: ಹೊಸೂರು ಸಮೀಪದ ಸಾಮಲಪಳ್ಳಿ ಸಮೀಪ ನಗರದಿಂದ ಶಬರಿಮಲೆಗೆ ತೆರಳುತ್ತಿದ್ದ ಕಾರು ಅಪಘಾತಗೊಂಡು ಕಾರಿನಲ್ಲಿದ್ದ ನಾಲ್ವರ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ವೇಲು ಮತ್ತು ಮುನಿರತ್ನಗೌಡ ಎಂದು ಗುರುತಿಸಲಾಗಿದೆ. ಈ ನಾಲ್ವರೂ ಕೆ.ಆರ್. ಮಾರುಕಟ್ಟೆಯಲ್ಲಿ ಕಾಯಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದು, ಅಯ್ಯಪ್ಪನ ದರ್ಶನಕ್ಕಾಗಿ ಕಾರಿನಲ್ಲಿ ಹೊರಟಿದ್ದರು.

ತಮಿಳುನಾಡಿನಿಂದ ಈಜಿಪುರಕ್ಕೆ ತರಲಾಗುತ್ತಿರುವ ಕೋದಂಡರಾಮ ಮೂರ್ತಿ ನಿಂತಿದ್ದಾಗ ಅದನ್ನು ನೋಡಿ ಕಣ್ತುಂಬಿಕೊಳ್ಳಲು ಕಾರಿನ ವೇಗ ಕಡಿಮೆ ಮಾಡಿದಾಗ ಹಿಂದಿನಿಂದ ಬಂದ ಲಾರಿ ಕಾರಿಗೆ ಡಿಕ್ಕಿಹೊಡೆದಿತ್ತು.

ಮುಂದೆಯೂ ಲಾರಿಯೊಂದು ಇದ್ದು ಎರಡು ಲಾರಿಗಳ ಮಧ್ಯೆ ಕಾರು ಸಿಲುಕಿಕೊಂಡು  ಇಬ್ಬರು ಸ್ಥಳದಲ್ಲೇ ಅಸುನೀಗಿದರು ಮತ್ತು ಇನ್ನಿಬ್ಬರಿಗೆ ತೀವ್ರಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. 

Recent Comments

Leave Comments

footer
Top