• 19 April 2019 20:01
Jai Kannada
Jai Kannada
Blog single photo
February 16, 2019

ಆಡಿಯೊ ಟೇಪ್ ಕೇಸ್: ಯಡಿಯೂರಪ್ಪ, ಸಂಗಡಿಗರ ಜಾಮೀನು 


ಬೆಂಗಳೂರು: ಗುರುಮಿಟ್ಕಲ್ ಶಾಸಕ ನಾಗನಗೌಡ ಪುತ್ರ ಶರಣಗೌಡ ದಾಖಲು ಮಾಡಿದ ಕೇಸ್‌ಗೆ ಸಂಬಂಧಿಸಿದಂತೆ ಯಡಿಯೂರಪ್ಪ, ಶಿವಣ್ಣಗೌಡ, ಪ್ರೀತಂಗೌಡ ಮತ್ತು ಮರಕಲ್ ಶನಿವಾರ ಜಾಮೀನು ಪಡೆದಿದ್ದಾರೆ.
ನಗರ ಸಿವಿಲ್ ವಿಶೇಷ ಕೋರ್ಟ್ ಈ ಜಾಮೀನು ಮಂಜೂರು ಮಾಡಿದ್ದು, ಎಲ್ಲಾ ನಾಲ್ವರು ತಲಾ  1 ಲಕ್ಷರೂ. ಬಾಂಡ್ ಸಲ್ಲಿಸುವಂತೆ ಸೂಚಿಸಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಬಿಡುಗಡೆ ಮಾಡಿದ ಆಡಿಯೊಟೇಪ್‌ಗೆ ಸಂಬಂಧಿಸಿದಂತೆ ಶರಣಗೌಡ ಬುಧವಾರ ಬಿಜೆಪಿ ನಾಯಕರ ವಿರುದ್ಧ ದೂರು ನೀಡಿದ್ದರು. 

ವಿವಾದಾತ್ಮಕ ಆಡಿಯೊ ಕ್ಲಿಪ್‌ನಲ್ಲಿ ಯಡಿಯೂರಪ್ಪ ಮತ್ತು ಶರಣಗೌಡ ನಡುವೆ ಸಂಭಾಷಣೆಯಿದೆ. ಯಡಿಯೂರಪ್ಪ ಉದ್ದೇಶಪೂರ್ವಕವಾಗಿ ಜೆಡಿಎಸ್ ಶಾಸಕನಿಗೆ ಆಮಿಷ ಒಡ್ಡಿದ್ದಾರೆಂದು ಕುಮಾರಸ್ವಾಮಿ ಆರೋಪಿಸಿದರು. 

ದೇವದುರ್ಗ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 506ರ ಅನ್ವಯ ದೂರನ್ನು ಸಲ್ಲಿಸಲಾಗಿದೆ. ವಿಧಾನಸಭೆಯಲ್ಲಿ ಆಡಿಯೊ ಟೇಪ್ ಕುರಿತಂತೆ ತನಿಖೆಗೆ ಎಸ್‌ಐಟಿ ರಚಿಸುವುದರ ವಿರುದ್ಧ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆಗೆ ಸಾಕ್ಷಿಯಾದ ಬಳಿಕ ದೇವದುರ್ಗ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Recent Comments

Leave Comments

footer
Top