• 19 April 2019 20:22
Jai Kannada
Jai Kannada
Blog single photo
February 16, 2019

ಕಸ್ಟಮ್ಸ್ ಸುಂಕ 200% ಏರಿಸಿದ ಭಾರತದಿಂದ ಪಾಕಿಸ್ತಾನದ ಸರಕುಗಳ ರಫ್ತಿಗೆ ಬ್ರೇಕ್

ನವದೆಹಲಿ: ಪುಲ್ವಾಮಾ ಭಯೋತ್ಪಾದನೆ ದಾಳಿ ಬಳಿಕ ಪಾಕಿಸ್ತಾನದ ಸೊಕ್ಕು ಅಡಗಿಸಲು ಭಾರತ ನಾನಾ ಪ್ರಯತ್ನ ಮಾಡುತ್ತಿದ್ದು, ಅವುಗಳ ಪೈಕಿ ಕಸ್ಟಮ್ಸ್ ಸುಂಕವನ್ನು ಶೇ. 200ಕ್ಕೆ ಹೆಚ್ಚಿಸಿದ್ದು ಒಂದಾಗಿದೆ. ತಾಜಾ ಹಣ್ಣುಗಳು, ಸಿಮೆಂಟ್, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಕಬ್ಬಿಣದ ಅದಿರು ಹೀಗೆ ಎಲ್ಲಾ ವಸ್ತುಗಳ ಮೇಲೆ 200% ಕಸ್ಟಮ್ಸ್ ಸುಂಕ ವಿಧಿಸಿದ್ದರಿಂದ ಭಾರತದ ಜತೆ ಪಾಕಿಸ್ತಾನದ ವ್ಯಾಪಾರಕ್ಕೆ ಅಕ್ಷರಶಃ ಬ್ರೇಕ್ ಬಿದ್ದಿದೆ. ಪಾಕಿಸ್ತಾನದ ರಫ್ತು ಪ್ರಮಾಣ 2017-18ರಲ್ಲಿ 3482.3 ಕೋಟಿ ರೂ.ಗಳಾಗಿದ್ದು, ಸುಂಕ ಹೆಚ್ಚಳದ ನಿರ್ಧಾರಿಂದ ಪಾಕಿಸ್ತಾನದಿಂದ ಭಾರತಕ್ಕೆ ರಫ್ತು ಉತ್ಪನ್ನಗಳ ಮೇಲೆ ತೀವ್ರ ಪೆಟ್ಟು ಬಿದ್ದಿದೆ.

 ಭಾರತ ಪಾಕ್‌ಗೆ ಅತ್ಯಂತ ನೆಚ್ಚಿನ ರಾಷ್ಟ್ರ ಎಂಬ ಸ್ಥಾನಮಾನವನ್ನು ಕೂಡ ಪುಲ್ವಾಮಾ ದಾಳಿಯ ಬಳಿಕ ತೆಗೆದುಹಾಕಿದೆ. ಈ ಸ್ಥಾನಮಾನ ತೆಗೆದಿದ್ದರಿಂದ ತಕ್ಷಣಕ್ಕೆ ಜಾರಿಗೆ ಬರುವಂತೆ ಪಾಕಿಸ್ತಾನದಿಂದ ಭಾರತಕ್ಕೆ ರಫ್ತಾಗುವ ಎಲ್ಲಾ ವಸ್ತುಗಳಿಗೆ ಶೇ. 200ರಷ್ಟು ಕಸ್ಟಮ್ಸ್ ಸುಂಕ ಏರಿಸಲಾಗಿದೆ.

 ಪಾಕಿಸ್ತಾನದಿಂದ ಭಾರತ ಆಮದುಮಾಡಿಕೊಳ್ಳುವ ಎರಡು ಮುಖ್ಯ ವಸ್ತುಗಳು ಹಣ್ಣುಗಳು ಮತ್ತು ಸಿಮೆಂಟ್.  ಅವುಗಳಿಗೆ ಪ್ರಸಕ್ತ ಕಸ್ಟಮ್ಸ್ ಸುಂಕ ಕ್ರಮವಾಗಿ 30-50 ಶೇಕಡ ಮತ್ತು 7.5 ಶೇಕಡದಷ್ಟಿದೆ. 200% ಕಸ್ಟಮ್ಸ್ ಸುಂಕ ವಿಧಿಸುವುದೆಂದರೆ ಬಹುಮಟ್ಟಿಗೆ ಪಾಕಿಸ್ತಾನದ ಸರಕುಗಳಿಗೆ ನಿಷೇಧ ವಿಧಿಸಿದ ಹಾಗಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 

Recent Comments

Leave Comments

footer
Top