• 19 March 2019 05:16
Jai Kannada
Jai Kannada
Blog single photo
February 16, 2019

ಮಗುವಿನ ನಿರೀಕ್ಷೆಯಲ್ಲಿದ್ದ ಹುತಾತ್ಮ ಯೋಧನ ಪತ್ನಿ 

ಪಾಟ್ನಾ/ ಬಾಗಲ್ಪುರ್: ಅವರು ಕುಟುಂಬಗಳ ಕನಸಾಗಿದ್ದರು. ಕುಟುಂಬಗಳ ಕನಸನ್ನು ಈಡೇರಿಸಲು ಕಾಯುತ್ತಿದ್ದಾಗಲೇ ಕ್ರೂರ ಕೃತ್ಯ ಅವರ ಬದುಕನ್ನು ನಿರ್ದಯವಾಗಿ ಅಂತ್ಯಗೊಳಿಸಿತು.

ಇಂದು ಸಂಜಯ್ ಕುಮಾರ್ ಸಿನ್ಹಾ ಮತ್ತು ರತನ್ ಕುಮಾರ್ ಠಾಕೂರ್ ಪುಲ್ವಾಮಾದ ಆತ್ಮಾಹುತಿ ದಾಳಿಗೆ ಬಲಿಯಾದ ಇಬ್ಬರು ಸೈನಿಕರು  ಗಡಿಯಾಚೆ ಭಯೋತ್ಪಾದನೆಯಿಂದ ಪೀಡಿತವಾದ ರಾಷ್ಟ್ರ ಪ್ರತಿದಿನ ಭದ್ರತಾ ಸಿಬ್ಬಂದಿ ಎದುರಿಸುವ ಅಪಾಯಗಳನ್ನು ನೆನಪಿಸುತ್ತದೆ.
ತೆರೆಗಾನಾ ದಿಹ್‌ನಿಂದ ಬಂದಿದ್ದ ದೂರವಾಣಿ ಕರೆ ಈ ಘಟನೆಯ ಬಗ್ಗೆ ಸಂದೇಶ ಮುಟ್ಟಿಸಿದಾಗ ಸಾರ್ಜಂಟ್ ಸಿನ್ಹಾ ಕುಟುಂಬ ಮತ್ತು ಸ್ನೇಹಿತರು ಕೂಡಲೇ ದುಃಖದಲ್ಲಿ ಮುಳುಗಿದರು. ಇದರ ಹಿಂದೆಯೇ ಸೇಡಿನ ಕಿಡಿ ಅವರ ನರನಾಡಿಗಳಲ್ಲಿ ಆವರಿಸಿತು.

ಸಾರ್ಜೆಂಟ್ ಪತ್ನಿ ಬಬಿತಾ ಪತಿಯ ಸಾವಿನ ಸುದ್ದಿ ಕೇಳಿದಾಗಿನಿಂದ ಅಳುತ್ತಿದ್ದು, ಅವಳಿಗೆ ಪುತ್ರಿಯರು ಸಾಂತ್ವನ ಹೇಳುತ್ತಿರುವ ದೃಶ್ಯ ಕರುಳು ಕಿವುಚುವಂತಿದೆ.
ಒಂದು ತಿಂಗಳ ರಜೆಯ ನಂತರ ಕಳೆದ ವಾರ ಅವರು ಮನೆ ಬಿಟ್ಟಿದ್ದರು. ಸಾರ್ಜೆಂಟ್ ತಂದೆ ಮಹೇಂದ್ರ ಪ್ರಸಾದ್ ಅವರಿಗೆ ಕುಟುಂಬದ ಭವಿಷ್ಯದ ಬಗ್ಗೆ ಆತಂಕ ಮೂಡಿದೆ.

ನನ್ನ ಪುತ್ರ ಹುತಾತ್ಮನಾಗಿದ್ದಾನೆ. ಸಂಜಯ್‌ಗೆ ಇಬ್ಬರು ಬೆಳೆದುನಿಂತಿರುವ ಹೆಣ್ಣುಮಕ್ಕಳಿದ್ದಾರೆ. ಹಿರಿಯ ಮಗಳ ವಿವಾಹ ಅಂತಿಮಗೊಳಿಸುವುದಾಗಿ ಸಂಜಯ್ ಹೇಳಿದ್ದ. ಆದರೆ ಈಗ ಏನುಮಾಡಬೇಕೆಂದು ತೋಚುತ್ತಿಲ್ಲ ಎಂದು ಉದ್ಗರಿಸಿದ್ದಾರೆ.
ಭಾಗಲ್ಪುರದಲ್ಲಿ ರತನ್ ಕುಮಾರ್ ಕುಟುಂಬ ಕೂಡ ದುರಂತಮಯವಾಗಿದೆ. ಅವನು ನಾಲ್ಕುವರ್ಷದ ಪುತ್ರ ಮತ್ತು ಪತ್ನಿಯನ್ನು ಬಿಟ್ಟು ಅಗಲಿದ್ದು, ಪತ್ನಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾಳೆ. ಶ್ರೀನಗರದಲ್ಲಿ ಕೆಲಸಕ್ಕೆ ಮತ್ತೆ ಸೇರಿದ ಕೂಡಲೇ ಕಾಲ್ ಮಾಡುವುದಾಗಿ ರತನ್ ಹೇಳಿದ್ದ. ಆದರೆ ಅವರ ಮೇಲಾಧಿಕಾರಿ ಕರೆ ಮಾಡಿ ಸಾವಿನ ಸುದ್ದಿ ತಿಳಿಸಿದರು ಎಂದು ರತನ್ ತಂದೆ ಹೇಳಿದರು.

 ರತನ್ ಕಿರಿಯ ಸೋದರ ಬಿಎ ಓದುತ್ತಿದ್ದು, ಅವನಿಗೆ ಭವ್ಯ ಭವಿಷ್ಯ ಕಲ್ಪಿಸುವ ಕನಸು ಕಂಡಿದ್ದೆವು. ಆದರೆ ರತನ್ ಸಾವಿನ ಸುದ್ದಿಯಿಂದ ಅವನ ಸೋದರ ಕೂಡ ಸೈನ್ಯ ಸೇರುವುದಕ್ಕೆ ನಾನು ಅವಕಾಶ ನೀಡಲು ಸಿದ್ಧನಿದ್ದೇನೆ. ಶತ್ರುವಿಗೆ ತಕ್ಕ ಪಾಠ ಕಲಿಸಬೇಕು ಎಂದಿದ್ದಾರೆ. 

Recent Comments

Leave Comments

footer
Top