• 19 March 2019 05:36
Jai Kannada
Jai Kannada
Blog single photo
February 15, 2019

ಇನ್ನೂ ನಾಲ್ವರು ಯೋಧರ ಸಾವು: ಹುತಾತ್ಮರ ಸಂಖ್ಯೆ 49ಕ್ಕೆ ಏರಿಕೆ 

 ಶ್ರೀನಗರ:  ಸಿಆರ್‌ಪಿಎಫ್ ಯೋಧರ ವಾಹನಗಳ ಮೇಲೆ ಭಯಾನಕ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಇನ್ನೂ ನಾಲ್ವರು ಯೋಧರು ತೀವ್ರ ಗಾಯಗಳಿಂದ ಅಸುನೀಗುವುದರೊಂದಿಗೆ ಹುತಾತ್ಮ ಯೋಧರ ಸಂಖ್ಯೆ 49ಕ್ಕೆ ಮುಟ್ಟಿದೆ.

ಸ್ಫೋಟಕ ತುಂಬಿದ ಎಸ್‌ಯುವಿ ಸಿಆರ್‌ಪಿಎಫ್ ಬಸ್ಸಿಗೆ ಡಿಕ್ಕಿಹೊಡೆಯುತ್ತಿದ್ದಂತೆ ಬಸ್ಸನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ಸಿಆರ್‌ಪಿಎಫ್ ವಾಹನದಲ್ಲಿದ್ದ ನಾಲ್ವರು ಯೋಧರು ಮೃತಪಟ್ಟಿದ್ದಾರೆ.

 ಉಗ್ರನು ಗುರಿಯಿಟ್ಟ ಸಿಆರ್‌ಪಿಎಫ್ ಬಸ್ಸಿನ ಎಲ್ಲಾ 44 ಯೋಧರು ಮೃತಪಟ್ಟಿದ್ದು, ಇನ್ನೊಂದು ವಾಹನದಲ್ಲಿದ್ದ ಐದು ಜನರು ಕೂಡ ಹುತಾತ್ಮರಾಗಿದ್ದಾರೆಂದು ಅಧಿಕಾರಿ ತಿಳಿಸಿದರು.ಇನ್ನೂ 35 ಸೈನಿಕರಿಗೆ ಸೇನಾ ಆಸ್ಪತ್ರೆಯಲ್ಲಿ ಬಹು ಗಾಯಗಳಿಗಾಗಿ ಚಿಕಿತ್ಸೆ ನೀಡಲಾಗುತ್ತಿದೆ.

1989ರಲ್ಲಿ ಪ್ರತ್ಯೇಕತಾವಾದಿ ಹೋರಾಟ ಭುಗಿಲೆದ್ದ ಬಳಿಕ ಜಮ್ಮು ಕಾಶ್ಮೀರದಲ್ಲಿ ಒಂದೇ ದಿನದಲ್ಲಿ ಭದ್ರತಾ ಪಡೆಗಳಿಗೆ ತೀವ್ರ ನಷ್ಟವುಂಟುಮಾಡಿದ ಭಯಾನಕ ಘಟನೆ ಇದಾಗಿದೆ.
 

Recent Comments

Leave Comments

footer
Top