• 19 March 2019 05:16
Jai Kannada
Jai Kannada
Blog single photo
February 15, 2019

ಪ್ರೇಮಿಗಳ ದಿನದಂದು ಬಲವಂತದ ಮದುವೆ ಮಾಡಿಸಿದ ಹಿಂದೂ ಕಾರ್ಯಕರ್ತರು 

ಹೈದರಾಬಾದ್: ಪ್ರೇಮಿಗಳ ದಿನದಂದು ಹೈದರಾಬಾದಿನ ಪಾರ್ಕ್‌ವೊಂದರಲ್ಲಿ ಒಟ್ಟಿಗೆ ಕುಳಿತು ಮಧುರಕ್ಷಣಗಳನ್ನು ಕಳೆಯುತ್ತಿದ್ದ ಜೋಡಿಯೊಂದಕ್ಕೆ 6 ಮಂದಿಯ ತಂಡ ಬಲವಂತದಿಂದ ಮದುವೆ ಮಾಡಿಸಿದ ಘಟನೆ ನಡೆದಿದೆ..

ಆನ್‌ಲೈನ್‌ನಲ್ಲಿ ಶೇರ್ ಮಾಡಲಾದ ವಿಡಿಯೊದಲ್ಲಿ ತಂಡವು ಜೋಡಿಯ ಹಣೆಗಳಿಗೆ ತಿಲಕವನ್ನು ಬಳಿದರು. ಯುವಕನಿಗೆ ಯುವತಿಯ ಕೊರಳಿಗೆ ಮಂಗಳಸೂತ್ರ ಕಟ್ಟುವಂತೆ ಸೂಚಿಸಲಾಯಿತು. ಬಳಿಕ ವಿಡಿಯೊ ಶೂಟ್ ಮಾಡುತ್ತಿದ್ದ ವ್ಯಕ್ತಿ ಧನ್ಯವಾದ ಸೋದರ, ಧನ್ಯವಾದ ಸೋದರಿ ಎಂದು ಹೇಳಿ, ಎಲ್ಲರೂ ದಂಪತಿಯನ್ನು ಸುತ್ತುವರೆದು ಸೆಲ್ಫೀ ಕ್ಲಿಕ್ಕಿಸಿಕೊಂಡರು. 

ವಿಡಿಯೊ ಮತ್ತು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪಲೋಡ್ ಮಾಡಲಾಗಿದೆ. ಮಹಿಳೆಯ ತಂದೆ ಸಂಬಂಧಿಯೊಬ್ಬರಿಂದ ವಿಡಿಯೊ ಕ್ಲಿಪ್ ಪಡೆದು ಪೊಲೀಸರಿಗೆ ದೂರು ನೀಡಿದರು.ದಂಪತಿಗೆ ಬಲಪ್ರಯೋಗದಿಂದ ಮದುವೆ ಮಾಡಿಸಿದ ತಂಡ ಹಿಂದೂ ಕಾರ್ಯಕರ್ತರೆಂದು ಹೇಳಲಾಗಿದೆ.

ಕೆಲವು ಹಿಂದೂ ಕಾರ್ಯಕರ್ತರು ಕಾಂಡ್ಲಕೋಯಾ ಆಕ್ಸಿಜನ್ ಪಾರ್ಕಿಗೆ ತೆರಳಿ ಜತೆಯಲ್ಲಿ ಕುಳಿತಿದ್ದ ಜೋಡಿಗೆ ಬಲಪ್ರಯೋಗದಿಂದ ಮದುವೆ ಮಾಡಿಸಿದ್ದಾರೆ. ಇದಕ್ಕೆ ಜೋಡಿ ಸಮ್ಮತಿ ನೀಡಿದ್ದಾರೋ ಇಲ್ಲವೋ ಎಂದು ತನಿಖೆ ನಡೆಸಲಾಗುತ್ತದೆ. ನಾವು ಶೀಘ್ರದಲ್ಲೇ ಆರೋಪಿಗಳನ್ನು ಗುರುತಿಸುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Recent Comments

Leave Comments

footer
Top