• 19 March 2019 05:22
Jai Kannada
Jai Kannada
Blog single photo
February 15, 2019

ಪೊಲೀಸರು ಬಂದಾಗ ನೇಣಿಗೆ ಕೊರಳೊಡ್ಡಿದ ರೇಪ್ ಆರೋಪಿ 

ಬ್ರಹ್ಮಾವರ: ರೇಪ್ ಪ್ರಕರಣದಲ್ಲಿ ಆರೋಪಿಯಾಗಿದ್ದ ವ್ಯಕ್ತಿಯೊಬ್ಬನನ್ನು ಹಿಡಿಯಲು ಪೊಲೀಸರು ಇಲ್ಲಿಗೆ ಆಗಮಿಸಿದಾಗ ಆರೋಪಿ ಮತ್ತು ಅವನ ಸಂಬಂಧಿತ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ. ಚಿಕ್ಕಮಗಳೂರಿನ ಶೃಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ರೇಪ್ ಪ್ರಕರಣದಲ್ಲಿ ಅವನು ಆರೋಪಿಯಾಗಿದ್ದ. ಕೆಲವು ಕಾಲದಿಂದ ಈ ಆರೋಪಿ ಕೋಟಾದ ಬಳಿ ಬಾಡಿಗೆ ಮನೆಯಲ್ಲಿ ತನ್ನ ಕುಟುಂಬಸ್ಥರ ಜತೆ ವಾಸವಾಗಿದ್ದ.

ಅವನ ಇರುವಿಕೆಯನ್ನು ಪತ್ತೆಹಚ್ಚಿದ ಪೊಲೀಸರು ಅವನನ್ನು ಬಂಧಿಸಲು ಆಗಮಿಸಿದ್ದರು. ಆಗ ಆರೋಪಿ ಮತ್ತು ಅವರ ಕುಟುಂಬದ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದರು.

ಆರೋಪಿಯನ್ನು ಶೃಂಗೇರಿಯ ಪ್ರಕಾಶ್ ಎಂದು ಗುರುತಿಸಲಾಗಿದೆ. ಸುಮಾರು 2 ವರ್ಷಗಳ ಹಿಂದಿನ ರೇಪ್ ಪ್ರಕರಣದಲ್ಲಿ ಅವನು ಆರೋಪಿಯಾಗಿದ್ದ. ಚಿತ್ರಪಾಡಿ ಗ್ರಾಮದಲ್ಲಿ ತನ್ನ ತಾಯಿ, ಮಹಿಳೆ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸವಿದ್ದ.
 ಮೊದಲಿಗೆ ಪೊಲೀಸರು ಅವನ ಮನೆಗೆ ಬಂದಾಗ ಬಾಗಿಲನ್ನು ತೆರೆದಿರಲಿಲ್ಲ. ಆರೋಪಿ ಮನೆಯಲ್ಲಿಲ್ಲವೆಂದು ಸಬೂಬು ಹೇಳಿದ್ದರು.

ಬಳಿಕ ವಕೀಲರೊಬ್ಬರ ಸಲಹೆ ಮೇಲೆ ವಾಪಸು ತೆರಳಿದ್ದರು. ಆದರೆ ಜಿಲ್ಲಾ ಎಸ್‌ಪಿಯ ಆದೇಶದ ಮೇಲೆ ಪೊಲೀಸ್ ಸಿಬ್ಬಂದಿ ಪುನಃ ಅವನ ಮನೆಗೆ ಧಾವಿಸಿ ಬಂಧಿಸಲು ಪ್ರಯತ್ನಿಸಿದರು. ಆ ಸಂದರ್ಭದಲ್ಲಿ ರೇಪ್ ಆರೋಪಿ ಮತ್ತು ಅವನೊಂದಿಗೆ ಸುಪ್ರಿಯಾ ಎಂಬ ಮಹಿಳೆ ನೇಣು ಹಾಕಿಕೊಂಡಿದ್ದನ್ನು ನೋಡಿದ ಪೊಲೀಸರು ಕೂಡಲೇ ಕೆಳಕ್ಕಿಳಿಸಿ ಬ್ರಹ್ಮಾವರದ ಆಸ್ಪತ್ರೆಗೆ ಸೇರಿಸಿದರು.
..

Recent Comments

Leave Comments

footer
Top