• 19 March 2019 05:19
Jai Kannada
Jai Kannada
Blog single photo
February 15, 2019

ಪಾಕ್‌ನಲ್ಲಿ ಜೈಷ್ ಮುಖಂಡನಿದ್ದರೂ ದಾಳಿಗೆ ಲಿಂಕ್ ಮಾಡ್ಬೇಡಿ ಎನ್ನುತ್ತಿದೆ ಪಾಕಿಸ್ತಾನ 

ಶ್ರೀನಗರ: ಜೈಷ್ ಎ ಮೊಹ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ನನ್ನು ಪಾಕಿಸ್ತಾನ ಜೈಲಿಗೆ ತಳ್ಳುವುದನ್ನು ಬಿಟ್ಟು ಸುರಕ್ಷಿತ ತಾಣ ಒದಗಿಸುವ ಮೂಲಕ ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ಉತ್ತೇಜನ ನೀಡುತ್ತಿದೆ. ಹೀಗಿದ್ದರೂ ಭಾರತದಲ್ಲಿ ಜೈಷ್ ಇ ಮೊಹ್ಮದ್ ಸಂಘಟನೆಯ ದಾಳಿ ನಡೆದಿದ್ದರೂ ಅದಕ್ಕೂ ನಮಗೂ ಏನೂ ಸಂಬಂಧವಿಲ್ಲವೆಂದು ಬೊಗಳೆ ಬಿಡುತ್ತಿದೆ.

ಕಾಶ್ಮೀರದ ಪುಲ್ವಾಮಾದಲ್ಲಿ ಯೋಧರ ಮೇಲೆ ಉಗ್ರರ ದಾಳಿಗೂ ನಮಗೂ ಸಂಬಂಧ ಕಲ್ಪಿಸಬೇಡಿ ಎಂದು ಪಾಕ್ ಬೊಗಳೆ ಬಿಡುತ್ತಿದೆ. 
ಕಾಶ್ಮೀರದ ಪುಲ್ವಾಮಾದಲ್ಲಿ ಯೋಧರ ವಾಹನಗಳ ಮೇಲೆ ದಾಳಿ ಗಂಭೀರ ವಿಚಾರ. ನಾವು ಜಗತ್ತಿನ ಯಾವುದೇ ಭಾಗದಲ್ಲಾದರೂ ಹಿಂಸಾಚಾರದ ಕೃತ್ಯಗಳನ್ನು ಖಂಡಿಸುತ್ತೇವೆ.

ಭಾರತದ ಮಾಧ್ಯಮ ಮತ್ತು ಸರ್ಕಾರ ಸಂಸ್ಥೆಗಳು ಯಾವುದೇ ತನಿಖೆ ನಡೆಸದೇ ಈ ದಾಳಿಯನ್ನು ಪಾಕಿಸ್ತಾನಕ್ಕೆ ಲಿಂಕ್ ಮಾಡುವುದನ್ನು ನಾವು ತಿರಸ್ಕರಿಸುತ್ತೇವೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ತಿಳಿಸಿದೆ.

.ಜೈಷ್ ಇ ಮೊಹ್ಮದ್ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ಗೆ ಸುರಕ್ಷಿತ ಆಶ್ರಯ ನೀಡಿರುವ ಪಾಕಿಸ್ತಾನದ ಕ್ರಮವನ್ನು ಭಾರತ ಇದಕ್ಕೆ ಮೊದಲೇ ಖಂಡಿಸಿತ್ತು. ಅಜರ್‌ನನ್ನು ಭಯೋತ್ಪಾದಕನೆಂದು ಘೋಷಿಸಿ ಜೈಲಿಗೆ ಹಾಕಬೇಕೆಂದು ಒತ್ತಾಯಿಸಿತ್ತು. ಜೈಷ್ ಸಂಘಟನೆಯ ಭಯೋತ್ಪಾದಕನೇ ಸ್ಫೋಟಕ ತುಂಬಿದ ಕಾರನ್ನು ಯೋಧರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದ. ಜೈಷ್ ಮುಖ್ಯಸ್ಥ ಅಜರ್ ಕುಮ್ಮಕ್ಕಿಲ್ಲದೇ ಇವೆಲ್ಲಾ ನಡೆಯಲು ಸಾಧ್ಯವೇ?
 .
 

Recent Comments

Leave Comments

footer
Top