• 19 November 2018 07:16
Jai Kannada
Jai Kannada
Blog single photo
December 25, 2017

ಫಿಲಿಪ್ಪೀನ್ಸ್ ಶಾಪಿಂಗ್ ಮಾಲ್‌ನಲ್ಲಿ 37 ಜನರು ಅಗ್ನಿಗಾಹುತಿ 

ದಾವೊ: ಕ್ರಿಸ್‌ಮಸ್ ಸಂಭ್ರಮಾಚರಣೆಗಾಗಿ ಶಾಪಿಂಗ್ ಮಾಲ್‌ಗೆ ತೆರಳಿದ್ದ ಜನರು ಅಗ್ನಿ ದುರಂತದಲ್ಲಿ   ಸಾವನ್ನಪ್ಪಿದ ಘಟನೆ ಪಿಲಿಪ್ಪೀನ್ಸ್ ದಾವೋನಲ್ಲಿ ಸಂಭವಿಸಿದೆ. ಅಗ್ನಿ ಅವಘಡದಲ್ಲಿ ಸುಮಾರು 37 ಮಂದಿ ಪ್ರಾಣಕಳೆದುಕೊಂಡಿದ್ದಾರೆ.

ಕ್ರಿಸ್‌ಮಸ್ ಆಚರಣೆ ಸಲುವಾಗಿ ಬಟ್ಟೆ, ಬರೆ, ಪೀಠೋಪಕರಣ ಖರೀದಿಸಲು ಶಾಪಿಂಗ್ ಮಾಲ್‌ನಲ್ಲಿ ಜನರು ತುಂಬಿಕೊಂಡಿದ್ದರು. ಇದ್ದಕ್ಕಿದ್ದಂತೆ ಹೊತ್ತಿಕೊಂಡ ಬೆಂಕಿಯಿಂದ ಜನರು ದಿಕ್ಕಾಪಾಲಾಗಿ ಓಡತೊಡಗಿದರು. ಅಗ್ನಿಶಾಮಕ ಸಿಬ್ಬಂದಿ ಮೂರನೇ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿಯ ಜ್ವಾಲೆ ನಂದಿಸಲು ಗಂಟೆಗಟ್ಟಲೆ ಶ್ರಮವಹಿಸಿದರು.

ಕಾಲ್ ಸೆಂಟರ್ ನೌಕರರು ಮಹಡಿಯಲ್ಲಿ ಸಿಕ್ಕಿಬಿದ್ದಿದ್ದಾರೆಂದು ಗೊತ್ತಾಗಿದ್ದು, ಅವರು ಉಳಿಯುವ ಸಾಧ್ಯತೆ ಶೂನ್ಯ ಎಂದು ದಾವೋ ಉಪಮೇಯರ್ ತಿಳಿಸಿದ್ದಾರೆ. ಬೆಂಕಿಗೆ ಕಾರಣವನ್ನು ತನಿಖೆ ನಡೆಸಲಾಗುತ್ತಿದೆ.

Recent Comments

Leave Comments

footer
Top