• 23 January 2020 22:22
Jai Kannada
Jai Kannada
Blog single photo
February 10, 2019

ಹವಾಮಾನ ಬದಲಾವಣೆಯಿಂದ ಜ್ವರದ ಬಾಧೆ 

ಮಂಗಳೂರು: ಬೇಸಿಗೆ ಸಮೀಪಿಸುತ್ತಿದ್ದಂತೆ, ನಗರದ ಪೌರರು ವೈರಲ್ ಜ್ವರದ ಬಾಧೆಗೆ ಗುರಿಯಾಗುತ್ತಿದ್ದಾರೆ. ಅನೇಕ ಮಂದಿ ಜ್ವರ, ತಲೆನೋವು, ಶೀತ, ಕೆಮ್ಮಿನಿಂದ ಬಳಲುತ್ತಿದ್ದಾರೆ.

ಹವಾಮಾನ ಬದಲಾವಣೆಯ ದೆಸೆಯಿಂದ ಆ ರೀತಿ ಆಗುತ್ತಿದೆ. ನಗರದಲ್ಲಿ ಮುಂಜಾನೆ ತಂಪಾದ ಹವಾಮಾನವಿರುತ್ತದೆ ಮತ್ತು ಆದರೆ ಸೂರ್ಯ ಮೇಲೇರುತ್ತಿದ್ದಂತೆ ತಾಪಮಾನ ಹೆಚ್ಚಾಗುತ್ತದೆ. ಉಷ್ಣಾಂಶದಲ್ಲಿ ದಿಢೀರ್ ಬದಲಾವಣೆಯನ್ನು ನಿಭಾಯಿಸುವುದು ದೇಹಕ್ಕೆ ಕಷ್ಟವಾಗುತ್ತದೆ.

ಇದರ ಜತೆಗೆ ಜ್ವರವನ್ನು ಉಂಟುಮಾಡುವ ವೈರಸ್‌ಗಳು ಉಷ್ಣಾಂಶ ವ್ಯತ್ಯಾಸವಾಗುವ ಸಂದರ್ಭದಲ್ಲಿ ವರ್ಧಿಸುತ್ತವೆ.ಆದ್ದರಿಂದಲೇ ಹೆಚ್ಚೆಚ್ಚು ಜನರು ಜ್ವರ ಮತ್ತು ಸಂಬಂಧಿಸಿದ ಲಕ್ಷಣಗಳಿಂದ ಬಳಲುತ್ತಿದ್ದಾರೆ.
ಬಿಸಿ ನೀರು ಕುಡಿಯುವ ಮೂಲಕ ಈ ಜ್ವರ ತಟ್ಟದಂತೆ ತಡೆಯಬಹುದು. ಕಾಯಿಸಿದ ತಣಿಸಿದ ನೀರನ್ನು ಕುಡಿಯುವುದು ಒಳ್ಳೆಯದು. ಸ್ನಾನಕ್ಕೆ ಕೂಡ ಬಿಸಿ ನೀರು ಬಳಸುವುದು ಒಳ್ಳೆಯದು.
 

Recent Comments

Leave Comments

footer
Top