• 19 March 2019 05:17
Jai Kannada
Jai Kannada
Blog single photo
February 07, 2019

ನಕಲಿ ವಿವಿಯಿಂದ ವಾಪಸಾದ ಭಾರತೀಯ ವಿದ್ಯಾರ್ಥಿಗಳ ಭವಿಷ್ಯ ಕಳಾಹೀನ 

 ಹೈದರಾಬಾದ್: ಅಮೆರಿಕದಲ್ಲಿ ಫಾರ್ಮಿಂಗ್‌ಟನ್ ನಕಲಿ ವಿಶ್ವವಿಶ್ವವಿದ್ಯಾನಿಲಯದ ಮೂಲಕ ವೀಸಾ ಪಡೆದು ಬಂಧನ ದುಃಸ್ವಪ್ನ ಎದುರಿಸಿದ ತೆಲಂಗಾಣ ಮತ್ತು ಆಂಧ್ರದ  ವಿದ್ಯಾರ್ಥಿಗಳನ್ನು ಅಮೆರಿಕದಿಂದ ಈ ವಾರ ವಾಪಸ್ ಕಳಿಸಲಾಗಿದೆ. ಯಾವುದೇ ಉಳಿತಾಯದ ಹಣ ಕೈಯಲ್ಲಿಲ್ಲದೇ ಭವಿಷ್ಯವೂ ಕಳಾಹೀನವಾಗಿದ್ದು ಕುಟುಂಬಗಳು ತಾವು ಸಾಲ ಪಡೆಯಲು ಬಳಸಿದ್ದ ಬ್ಯಾಂಕ್ ಖಾತರಿಯನ್ನು ಕಳೆದುಕೊಳ್ಳುತ್ತೇವೆಂಬ ಭಯ ವಿದ್ಯಾರ್ಥಿಗಳನ್ನು ಆವರಿಸಿದೆ.

ಆದಷ್ಟು ಬೇಗ ಸಾಲವನ್ನು ತೀರಿಸುವಂತೆ ಬ್ಯಾಂಕ್ ಅಧಿಕಾರಿಗಳು ಒತ್ತಡ ಹೇರಿದ್ದು  ಈ ಸಾಲದ ಮೊತ್ತ 20 ಲಕ್ಷದಿಂದ 40 ಲಕ್ಷ ಮುಟ್ಟುತ್ತದೆ. ಈಗ ಹೈದರಾಬಾದಿನಲ್ಲಿ ಉದ್ಯೋಗಕ್ಕಾಗಿ ಇವರು ಅರಸುತ್ತಿದ್ದು, ಉದ್ಯೋಗ ಸಿಕ್ಕರೂ 15,000 ದಿಂದ 20,000 ವರೆಗಿನ ವೇತನಕ್ಕೆ ಕೆಲಸ ಮಾಡುವ ಪರಿಸ್ಥಿತಿ ಉಂಟಾಗಿದೆ.

 ಶಾಖಾ ಮ್ಯಾನೇಜರ್ ನನ್ನ ತಂದೆಗೆ ಕರೆ ಮಾಡಿ ಮುಂದಿನ ನಾಲ್ಕು ತಿಂಗಳಲ್ಲಿ ಸಾಲ ತೀರಿಸುವಂತೆ ಸೂಚಿಸಿದ್ದು, ಇಲ್ಲದಿದ್ದರೇ ನಮ್ಮ ಭೂಮಿಯನ್ನು ಮುಟ್ಟುಗೋಲು ಹಾಕುವುದಾಗಿ ಹೇಳಿದ್ದಾರೆಂದು ಎಲ್ಬಿ ನಗರ ಮೂಲದ ರಮೇಶ್ ತಿಳಿಸಿದ್ದಾರೆ.

Recent Comments

Leave Comments

footer
Top