• 19 March 2019 05:33
Jai Kannada
Jai Kannada
Blog single photo
December 25, 2017

ಅಂಜನಿಪುತ್ರ ಪ್ರದರ್ಶನದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಗೆ ನಿರ್ಧಾರ  

ಬೆಂಗಳೂರು: ಪುನೀತ್ ರಾಜ್‌ಕುಮಾರ್ ಅಭಿನಯದ ಅಂಜನಿಪುತ್ರ ಚಿತ್ರದಲ್ಲಿ ವಕೀಲರನ್ನು ಅವಮಾನಿಸುವ ರೀತಿಯಲ್ಲಿ ಸಂಭಾಷಣೆ ಇರುವ ಹಿನ್ನೆಲೆಯಲ್ಲಿ ಕೋರ್ಟ್‌ನಿಂದ ಚಿತ್ರಪ್ರದರ್ಶನಕ್ಕೆ ತಡೆಯಾಜ್ಞೆ ತಂದಿದ್ದರೂ ನಿನ್ನೆ ಭಾನುವಾರ ಅಂಜನಿಪುತ್ರ ಚಿತ್ರವನ್ನು ಪ್ರದರ್ಶಿಸಲಾಗಿದೆ. ಈ ಕುರಿತು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವುದಾಗಿ ವಕೀಲರು ತಿಳಿಸಿದ್ದಾರೆ.

ವಕೀಲರ ಬಗ್ಗೆ ಅವಹೇಳನಕಾರಿ ಸಂಭಾಷಣೆ ಇರುವುದೆಂದು ಆರೋಪಿಸಿ,  40ನೇ ಸಿಟಿ ನ್ಯಾಯಾಲಯಕ್ಕೆ ನಾರಾಯಣ ಕುಮಾರ್, ವಿಜಯಕುಮಾರ್ ಸೇರಿದಂತೆ ನಾಲ್ವರು ವಕೀಲರು ಕೇಸ್ ಹಾಕಿದ್ದರು.

ಶನಿವಾರ ಅರ್ಜಿ ವಿಚಾರಣೆ ಎತ್ತಿಕೊಂಡಿದ್ದ ನ್ಯಾಯಾಧೀಶರು ಜನವರಿ 2ರವರೆಗೆ ತಡೆಯಾಜ್ಞೆ ನೀಡಿದ್ದರು. ಹೀಗಿದ್ದರೂ ಕೂಡ ಚಿತ್ರಮಂದಿರದಲ್ಲಿ ಪ್ರದರ್ಶಿಸಿರುವುದು ಕಾನೂನುಬಾಹಿರ. ನ್ಯಾಯಾಂಗ ನಿಂದನೆ ಅರ್ಜಿಯನ್ನು ಕೂಡಲೇ ಸಲ್ಲಿಸಲಾಗುತ್ತದೆ ಎಂದು ನಾರಾಯಣ ಮೂರ್ತಿ ಹೇಳಿದರು.

‘ಚಿತ್ರದ ವಿವಾದಿತ ದೃಶ್ಯ ಕತ್ತರಿಸುವುದಕ್ಕೆ ಸಂಬಂಧಿಸಿದಂತೆ  ಸೆನ್ಸಾರ್‌ ಮಂಡಳಿಯು ಮಂಗಳವಾರ ನಿರ್ಧಾರ ಕೈಗೊಳ್ಳಲಿದೆ ಎಂದು  ಮಂಡಳಿಯ ಉಪಾಧ್ಯಕ್ಷ ಮನು ಬಳಿಗಾರ  ತಿಳಿಸಿದ್ದಾರೆ. ಈ ಬಗ್ಗೆ ವಿಚಾರಿಸಲು ಅವರು ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ನಾರಾಯಣ ಸ್ವಾಮಿ ಹೇಳಿದರು.

Recent Comments

Leave Comments

footer
Top