• 19 November 2018 06:56
Jai Kannada
Jai Kannada
Blog single photo
December 24, 2017

ಗಲ್ಲು ಶಿಕ್ಷೆಗೆ ಗುರಿಯಾಗಿರುವ ಜಾಧವ್‌ರನ್ನು ಇಂದು ಪತ್ನಿ, ತಾಯಿ ಭೇಟಿ 

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಗೂಢಚಾರಿಕೆ ಆರೋಪದ ಮೇಲೆ  ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್ ಅವರನ್ನು ಭೇಟಿ ಮಾಡಲು ಅವರ ಪತ್ನಿ ಮತ್ತು ತಾಯಿ ಇಲ್ಲಿಗೆ ಸೋಮವಾರ ಆಗಮಿಸಲಿದ್ದಾರೆ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ತಿಳಿಸಿದೆ.

ಇಸ್ಲಾಮಾ‌ಬಾದ್‌‌ಗೆ ಅವರು ವಾಣಿಜ್ಯ ವಿಮಾನದಲ್ಲಿ ಆಗಮಿಸಿ  ಜಾಧವ್ ಅವರನ್ನು ಭೇಟಿ ಮಾಡಿದ ಬಳಿಕ ಅದೇ ದಿನ ವಾಪಸಾಗಲಿದ್ದಾರೆ. ಭಾರತದ ಉಪಕಮೀಷನರ್ ಜೆ.ಪಿ. ಸಿಂಗ್ ಅವರನ್ನು ಜತೆಗೂಡಲಿದ್ದಾರೆ.
ಜಾದವ್ ಕುಟುಂಬ ಬೇಗನೇ ಬಂದು ಅವರನ್ನು ಕಾಣಲಿ, ಇಲ್ಲದಿದ್ದರೆ ನಂತರ ಭೇಟಿ ಮಾಡಿಸುವುದು ಕಷ್ಟವಾಗುತ್ತದೆ ಎಂದು ಪಾಕಿಸ್ತಾನ ಭಾರತಕ್ಕೆ ತಿಳಿಸಿತ್ತು.
ಈ ಭೇಟಿಯು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ನೆರವೇರಲಿದ್ದು, ಅದರ ಫೋಟೊ ಮತ್ತು ವಿಡಿಯೊ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಪಾಕ್ ವಿದೇಶಾಂಗ ಕಚೇರಿ ವಕ್ತಾರ ಫೈಸಲ್ ಹೇಳಿದರು.
ಇಸ್ಲಾಮಿಕ್ ಸಂಪ್ರದಾಯಗಳು ಮತ್ತು ಮಾನವೀಯ ನೆಲೆಯ ಆಧಾರದ ಮೇಲೆ ಈ ಭೇಟಿಯನ್ನು ಏರ್ಪಡಿಸಲಾಗಿದೆ ಎಂದು ಫೈಸಲ್ ತಿಳಿಸಿದರು.
47 ವರ್ಷದ ಜಾಧವ್ ಅವರನ್ನು ಪಾಕಿಸ್ತಾನದ ಮಿಲಿಟರಿ ಕೋರ್ಟ್ ಕಳೆದ ಏಪ್ರಿಲ್‌ನಲ್ಲಿ ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ ಬಂಧಿಸಿ ಮರಣದಂಡನೆ ಶಿಕ್ಷೆಗೆ ಗುರಿಮಾಡಿತ್ತು. ಮೇನಲ್ಲಿ ಭಾರತ ಐಸಿಜೆನಲ್ಲಿ ಮೇಲ್ಮನವಿ ಸಲ್ಲಿಸಿ ಮರಣದಂಡನೆಗೆ ತಡೆಯಾಜ್ಞೆ ತರುವಂತೆ ಮಾಡಿತ್ತು.

 ಜಾಧವ್ ಇರಾನ್ ಮೂಲಕ ಪ್ರವೇಶಿಸಿದ್ದರಿಂದ ಪ್ರಕ್ಷುಬ್ಧ ಬೆಲೂಚಿಸ್ತಾನ್ ಪ್ರಾಂತ್ಯದಿಂದ ಅವರನ್ನು ಭದ್ರತಾ ಪಡೆಗಳು ಬಂಧಿಸಿದ್ದಾಗಿ ಪಾಕಿಸ್ತಾನ ಪ್ರತಿಪಾದಿಸಿದೆ.

ಆದರೆ ವಾಸ್ತವವಾಗಿ ನಡೆದಿದ್ದೇ ಬೇರೆಯಾಗಿತ್ತು. ಜಾಧವ್ ಭಾರತದ ನೌಕಾಪಡೆಯಿಂದ ನಿವೃತ್ತಿಯಾದ ನಂತರ ವ್ಯವಹಾರ ಹಿತಾಸಕ್ತಿ ದೃಷ್ಟಿಯಿಂದ ಇರಾನ್‌ನಲ್ಲಿ ತಂಗಿದ್ದಾಗ ಪಾಕಿಸ್ತಾನ ಅವರನ್ನು ಅಪಹರಿಸಿ ಗೂಢಚಾರಿಕೆಯ ಆರೋಪ ಹೊರಿಸಿದೆ ಎಂದು ಭಾರತ ವಾದಿಸುತ್ತಿದೆ.

Recent Comments

Leave Comments

footer
Top