• 19 November 2018 06:21
Jai Kannada
Jai Kannada
Blog single photo
December 24, 2017

ಟಿ 20 ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ ತಂಡ

ಮುಂಬೈ: ಸಿಂಹಳೀಯರನ್ನು ಬೇಟೆಯಾಡಿದ ಭಾರತ ತಂಡ ಟಿ 20 3ನೇ ಪಂದ್ಯದಲ್ಲಿ ಗೆಲುವು ಗಳಿಸಿ ಸರಣಿ ಬಾಚಿಕೊಂಡಿದೆ. 3-0 ಅಂತರದಲ್ಲಿ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ವಾಂಖೆಡೆಯಲ್ಲಿ ಲಂಕನ್ನರಿಗೆ ಮೊದಲ ಬ್ಯಾಟಿಂಗ್ ಅವಕಾಶ ನೀಡಲಾಯಿತು.

ಸಮರವಿಕ್ರಮ, ವಿಕ್ರಮಸಿಂಘೆ ಔಟಾದ ಬಳಿಕ ನಂತರ ಬಂದ ಬ್ಯಾಟ್ಸ್‌ಮನ್‌ಗಳು ಬೇಗನೇ ಔಟಾದರು. ಏಳು ವಿಕೆಟ್ ನಷ್ಟಕ್ಕೆ ಲಂಕಾ 136 ರನ್ ಗಳಿಸಿತು.ಭಾರತದ ಪರ ಜಯದೇವಿ ಉನದ್‌ಕತ್ ಮನೋಜ್ಞ ಬೌಲಿಂಗ್ ಮೂಲಕ 4 ವಿಕೆಟ್ ಕಬಳಿಸಿದರು.

ಟೀಂ ಇಂಡಿಯಾಗೆ ಕೂಡ ಉತ್ತಮ ಆರಂಭ ಸಿಗಲಿಲ್ಲ. ಭಾರತ ಆರಂಭದಲ್ಲಿ ಪ್ರಯಾಸದಿಂದ ಆಡಿದರೂ 5 ವಿಕೆಟ್‌ಗಳ ನಷ್ಟಕ್ಕೆ 19.2 ಓವರುಗಳಲ್ಲಿ ಗುರಿಯನ್ನು ಮುಟ್ಟಿತು. ಬೇಗ ಆಟವನ್ನು ಮುಗಿಸುವ ಆತುರದಲ್ಲಿ ಆಡಿದ ಟೀಂ ಇಂಡಿಯಾದ ಆಟಗಾರರು ಕಳಪೆ ಶಾಟ್‌ಗಳನ್ನು ಹೊಡೆದು ಔಟಾದರು.

 ಕೊನೆಯ ಓವರಿನಲ್ಲಿ ಮೂರು ರನ್ ಅವಶ್ಯಕತೆಯಿತ್ತು. ಧೋನಿ ಮೊದಲ ಎಸೆತದಲ್ಲಿ ಎರಡು ರನ್ ಮತ್ತು ಎರಡನೇ ಎಸೆತದಲ್ಲಿ ಮಿಡ್ ವಿಕೆಟ್ ಬೌಂಡರಿಗೆ ಚೆಂಡನ್ನು ಅಟ್ಟಿ ಭಾರತಕ್ಕೆ ಜಯ ತಂದಿತ್ತರು. ಮನೀಶ್ ಪಾಂಡೆ 32 ರನ್ ಮತ್ತು ಧೋನಿ 16 ರನ್ ಗಳಿಸಿ ಅಜೇಯರಾಗಿ ಉಳಿದರು.

Recent Comments

Leave Comments

footer
Top