• 23 September 2019 04:06
Jai Kannada
Jai Kannada
Blog single photo
February 02, 2019

ಧ್ರುವೀಯ ಸುಳಿಗಾಳಿಯ ದಿಕ್ಕುಬದಲು: ಅಮೆರಿಕದಲ್ಲಿ ಭಯಾನಕ ಚಳಿ 

 ಅಮೆರಿಕದಲ್ಲಿ ಹಿಂದೆಂದೂ ಕಂಡರಿಯದ ಮೈಕೊರೆಯುವ ಶೀತಗಾಳಿ. ಧ್ರುವೀಯ ಸುಳಿಗಾಳಿಯಿಂದ ಅತೀ ಕಡಿಮೆ ಉಷ್ಣಾಂಶ ದಾಖಲಾಗಿ ವಿವಿಧ ರಾಜ್ಯಗಳಲ್ಲಿ ಕನಿಷ್ಠ 21 ಜನರು ಬಲಿಯಾಗಿದ್ದಾರೆ. ನ್ಯೂಯಾರ್ಕ್‌ನಿಂದ ಮೋಂಟಾನಾವರೆಗೆ ಹವಾಮಾನ ವ್ಯವಸ್ಥೆಯು ಅಂಟಾರ್ಟಿಕಾದಲ್ಲಿ ದಾಖಲಾದ ಉಷ್ಣಾಂಶಕ್ಕಿಂತ ಕಡಿಮೆ ದಾಖಲಿಸಿತು. ಕೇವಲ ಐದು ನಿಮಿಷಗಳು ಮನೆಯಿಂದ ಹೊರಕ್ಕೆ ಬಂದರೂ ಶೈತ್ಯ ಹುಣ್ಣು ಉಂಟಾಗುತ್ತದೆ. ಶೈತ್ಯ ಹುಣ್ಣಿನಿಂದ ರಕ್ತನಾಳಗಳು ಸಂಕುಚಿಸಿ ರಕ್ತದ ಹರಿವು ನಿಲ್ಲುತ್ತದೆ.

ಮೌಂಟ್ ಕಾರೋಲ್‌ನಲ್ಲಿ - 38 ಡಿಗ್ರಿ ಉಷ್ಣಾಂಶ ದಾಖಲಾಗಿದ್ದು. - 60 ಡಿಗ್ರಿ ಉಷ್ಣಾಂಶಕ್ಕಿಂತ ಕಡಿಮೆ ವಾಯುಶೈತ್ಯ ಉಷ್ಣಾಂಶವು ಈ ವಾರ ದಾಖಲಾಗಿದೆ.

ಮನೆಗಳಲ್ಲಿ ನೀರು ಹೆಪ್ಪುಗಟ್ಟುತ್ತದೆ, ತಲೆಯ ಕೂದಲು ಗಾಳಿಯಲ್ಲಿ ಘನೀಕರಿಸುತ್ತದೆ. ಧ್ರುವೀಯ ಗಾಳಿಯ ಪ್ರವಾಹ ಅಮೆರಿಕದ ಮಿಡ್‌ವೆಸ್ಟ್ ಬಹುತೇಕ ಭಾಗದಲ್ಲಿ ದಾಖಲೆಯ ಕಡಿಮೆ ಉಷ್ಣಾಂಶವನ್ನು ತಂದಿದೆ.

ಇಷ್ಟೊಂದು ಕೊರೆಯುವ ಚಳಿ ಧ್ರುವೀಯ ಸುಳಿಗಾಳಿಯ ದಿಕ್ಕು ಬದಲಾಗಿದ್ದರಿಂದ ಉಂಟಾಗಿದೆ. ಉತ್ತರಧ್ರುವದಲ್ಲಿ ಇದು ಸಾಮಾನ್ಯವಾಗಿ ತಿರುಗುವ ಗಾಳಿಯ ಪ್ರವಾಹವಾಗಿದ್ದು, ಆ ಪ್ರವಾಹಕ್ಕೆ ಅಡ್ಡಿಯಾಗಿರುವುದು ಇಷ್ಟೆಲ್ಲಾ ಅವಾಂತರಕ್ಕೆ ಕಾರಣ.
 ನಿಖರವಾಗಿ ಎಷ್ಟು ಶೀತದ ಹವೆಯಿದೆಯೆಂದರೆ ಮಿಡ್ ವೆಸ್ಟ್ ಕೆಲವು ಭಾಗಗಳಲ್ಲಿ ಮೈನಸ್ 29 ಡಿಗ್ರಿ ಸೆಲ್ಸಿಯಸ್ ಮುಟ್ಟಿದ್ದು, ದಕ್ಷಿಣ ಧ್ರುವಕ್ಕಿಂತ ಹೆಚ್ಚು ಶೀತಗಾಳಿಯಿದೆ. ಕುದಿಯುವ ನೀರನ್ನು ಮೇಲಿನಿಂದ ಸುರಿದರೆ ಅದು ಕೆಳಕ್ಕೆ ಬೀಳುವಷ್ಟರಲ್ಲಿ ಘನೀಕರಣವಾಗುವ ವಿಡಿಯೊಗಳು ವೈರಲ್ ಆಗಿವೆ.

 

Recent Comments

Leave Comments

footer
Top