• 19 March 2019 05:26
Jai Kannada
Jai Kannada
Blog single photo
February 01, 2019

ಬಜೆಟ್ ಎಲ್ಲಾ ವರ್ಗದ ಜನರನ್ನು ತೃಪ್ತಿಪಡಿಸಿದೆಯೇ ?

ಬೆಂಗಳೂರು: ನರೇಂದ್ರ ಮೋದಿ ಸರ್ಕಾರ ಮಂಡಿಸಿದ ಬಜೆಟ್ ಎಲ್ಲಾ ವರ್ಗದ ಜನರನ್ನು ತೃಪ್ತಿಪಡಿಸುವ ಪ್ರಕ್ರಿಯೆಯಾಗಿದೆ ಎಂದು ಕೆಲವು ಮಾಧ್ಯಮಗಳು ಹೇಳಿದರೂ ಇದು ದಶಕಗಳಿಂದ ಶೋಷಿತರಾಗಿ ಅತೃಪ್ತಿಯಿಂದ ಕುದಿಯುತ್ತಿರುವ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಎಂದು ವಿಶ್ಲೇಷಿಸಬಹುದು. ಏಕೆಂದರೆ ಬಜೆಟ್‌ನಲ್ಲಿ ರೈತರಿಗೆ, ಬಡ ಕೂಲಿಕಾರರಿಗೆ ಅನೇಕ ಕೊಡುಗೆಗಳನ್ನು ಸರ್ಕಾರ ಘೋಷಿಸಿದೆ. ಆದರೆ ಆ ಕೊಡುಗೆಗಳ ಮಹತ್ವ ಎಷ್ಟು ಎನ್ನುವುದನ್ನು ಅರಿಯಬೇಕಾಗಿದೆ.

ರೈತರಿಗೆ ವರ್ಷಕ್ಕೆ 6000 ರೂ. ಎಂದರೆ ತಿಂಗಳಿಗೆ ಕೇವಲ 500 ರೂ. ಕೊಡುಗೆ ನೀಡಿದಂತಾಗುತ್ತದೆ. ಅಲ್ಲದೇ ಪ್ರಕೃತಿ ವಿಕೋಪದಿಂದ ಬೆಳೆ ನಷ್ಟವಾದರೆ ಸಾಲದಲ್ಲಿ ಶೇ. 5ರಷ್ಟು ಮಾತ್ರ ಬಡ್ಡಿ ಕಡಿತ ಮಾಡುವುದಾಗಿ ತಿಳಿಸಲಾಗಿದೆ. ಬೆಳೆ ನಾಶವಾದಾಗ ಸಾಲವನ್ನು ತೀರಿಸುವುದೇ ರೈತರಿಗೆ ಅಸಾಧ್ಯವಾಗಿರುವಾಗ ಶೇ. 5ರಷ್ಟು ಬಡ್ಡಿ ಕಡಿತದಿಂದ ಏನು ಪ್ರಯೋಜನ ಎನ್ನುವುದನ್ನು ಗಮನಿಸಬೇಕಾಗಿದೆ.ಇನ್ನು ಅಸಂಘಟಿತ ವಲಯದ ಕಾರ್ಮಿಕರು ಈಗಲೂ ಶೋಷಣೆಗೊಳಗಾಗಿದ್ದಾರೆ.

ಅವರಿಗೆ ಯಾವುದೇ ಬೋನಸ್ ಅಥವಾ ರಜೆ ಸೌಲಭ್ಯವಾಗಲಿ ಇರುವುದಿಲ್ಲ. ಇಂತಹ ಕಾರ್ಮಿಕರಿಗೆ ನಿರ್ದಿಷ್ಟ ಪ್ರಮಾಣದ ಮಾಸಿಕ  ಕನಿಷ್ಠ ವೇತನ ಜಾರಿಗೆ ತಂದರೆ,  ಅವರ ಬದುಕು ಹಸನಾಗುತ್ತದೆ. ಅಸಂಘಟಿತ ವಲಯದ ಕಾರ್ಮಿಕರ ಸದ್ಯದ ಜೀವನದ ಸ್ಥಿತಿಗಳನ್ನು ಸುಧಾರಿಸುವುದು ಇಂದಿನ ಅಗತ್ಯವಾಗಿತ್ತು. ಹಲ್ಲಿದ್ದಾಗ ತಿನ್ನಲು ಕಡಲೆ ಸಿಗದಿರುವುದಾಗ ಹಲ್ಲು ಹೋದ ಮೇಲೆ ಕಡಲೆ ಸಿಕ್ಕರೆ ಏನು ಪ್ರಯೋಜನ ಎಂಬಂತಾಗಿದೆ ಸರ್ಕಾರದ ಪಿಂಚಣಿ ಯೋಜನೆ.

ಇನ್ನು ಬಿಪಿಎಲ್ ಕಾರ್ಡುದಾರರಿಗೆ ಯಾವುದೇ ನಗದು ಹಣ ವರ್ಗಾವಣೆಯನ್ನು ಬಜೆಟ್‌ನಲ್ಲಿ ಪ್ರಕಟಿಸಿಲ್ಲ. ಇದಲ್ಲದೇ ಹಿರಿಯ ನಾಗರಿಕರ ಹಿತರಕ್ಷಣೆಗೆ ಯಾವುದೇ ಉಚಿತ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರ ಇದುವರೆಗೆ ಪ್ರಕಟಿಸಿಲ್ಲ. ಇನ್ನು ಉದ್ಯೋಗಾವಕಾಶಗಳನ್ನು ಹೇಗೆ ಸೃಷ್ಟಿಸಲಾಗುತ್ತದೆ ಎನ್ನುವುದನ್ನು ಬಜೆಟ್‌ನಲ್ಲಿ ತಿಳಿಸಲಾಗಿಲ್ಲ. ಇನ್ನೂ ನಿರುದ್ಯೋಗ ಭೂತಾಕಾರವಾಗಿ ಕಾಡುತ್ತಿದ್ದು, ಉದ್ಯೋಗ ಸೃಷ್ಟಿಯ ಮಾರ್ಗೋಪಾಯಗಳನ್ನು ಕುರಿತು ಸರ್ಕಾರ ಯೋಚಿಸಬೇಕಾಗಿದೆ.

Recent Comments

Leave Comments

footer
Top