• 24 September 2018 11:54
Jai Kannada
Jai Kannada
Blog single photo
December 24, 2017

ಮಾರ್ಚ್‌ವರೆಗೆ ಎಂಆರ್‌ಪಿ ಸ್ಟಿಕರ್ ಅಂಟಿಸಲು ಅವಕಾಶ

ನವದೆಹಲಿ: ಜಿಎಸ್‌ಟಿ ಜಾರಿಗೆ ಬಂದ ನಂತರದ ಹೊಸ ಎಂಆರ್‌ಪಿ ದರಗಳನ್ನು ಪ್ಯಾಕ್ ಮಾಡಿದ ಉತ್ಪನ್ನಗಳ ಮೇಲೆ ಬಿಂಬಿಸಲು ಕಂಪನಿಗಳು ಸ್ಟಿಕರ್‌ಗಳನ್ನು ಅಂಟಿಸುವುದಕ್ಕೆ  2018ರ ಮಾರ್ಚ್‌ವರೆಗೆ ಸರ್ಕಾರ ಅವಕಾಶ ನೀಡಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಶನಿವಾರ ತಿಳಿಸಿದರು.

ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಜುಲೈ 1ರಿಂದ ಜಾರಿಗೆ ಬಂದ ಬಳಿಕ ಕಂಪನಿಗಳಿಗೆ ಮಾರಾಟವಾಗದ ಸರಕುಗಳ ಪ್ಯಾಕ್ ಮೇಲೆ ಗರಿಷ್ಠ ಚಿಲ್ಲರೆ ದರದ ಹೊಸ ಸ್ಟಿಕರ್‌ಗಳನ್ನು ಅಂಟಿಸುವುದಕ್ಕೆ ಸೂಚಿಸಲಾಗಿದೆ.

ಕಳೆದ ನವೆಂಬರ್ ಮಧ್ಯಾವಧಿಯಲ್ಲಿ 200ಕ್ಕೂ ಹೆಚ್ಚು ಸರಕುಗಳ ಮೇಲಿನ ದರ ಕಡಿತವಾದ ಬಳಿಕ ಸಚಿವಾಲಯವು 2011ರ ಲೀಗಲ್ ಮೆಟ್ರೋಲಜಿ ನಿಯಮಗಳ ಅನ್ವಯ ಹೆಚ್ಚುವರಿ ಸ್ಟಿಕರ್‌ಗಳನ್ನು ಅಂಟಿಸಲು ಅನುಮತಿ ನೀಡಲಾಗಿದೆ.

Recent Comments

Leave Comments

footer
Top