• 18 November 2019 11:11
Jai Kannada
Jai Kannada
Blog single photo
January 13, 2019

ಶಿಕ್ಷಣ ಬದುಕುವುದಕ್ಕೆ ಬೇಕಾದ ಜ್ಞಾನ ಸಂಪಾದನೆ

ಶಿಕ್ಷಣ ಕೇವಲ ಓದುವುದು ಮತ್ತು ಬರೆಯುವುದಲ್ಲ. ಶಿಕ್ಷಣವನ್ನು ತಮ್ಮ ಸ್ವಂತ ಅನುಕೂಲಗಳಿಗೆ ಬಳಸುವುದು ಮತ್ತು ಅದರಿಂದ ಪಡೆದ ಜ್ಞಾನವನ್ನು ಸ್ವಯಂ ಬೆಳವಣಿಗೆಗೆ ಬಳಸುವುದಾಗಿದೆ.

 ಶಿಕ್ಷಣದಿಂದ ಇತರರ ಮೇಲೆ ಅವಲಂಬಿತರಾಗದೇ ಸ್ವಾವಲಂಬಿ ಜೀವನವನ್ನು ನಡೆಸಬಹುದು. ಇದು ಜನರನ್ನು ಸಾಕ್ಷರರನ್ನಾಗಿ ಮಾಡುವ ಕುರಿತಾಗಿಲ್ಲ. ಸಾಕ್ಷರತೆ ಸಂಪೂರ್ಣವಾಗಿ ಭಿನ್ನ ಶಿಕ್ಷಣ.

 ಸಾಕ್ಷರತೆ ಎನ್ನುವುದು ಓದುವುದು ಮತ್ತು ಬರೆಯುವ ಸಾಮರ್ಥ್ಯ. ಆದರೆ ಶಿಕ್ಷಣವು ಪ್ರತಿಯೊಂದರ ಹಿಂದಿರುವ ಕಾರಣಗಳನ್ನು ಹುಡುಕುವುದು ಮತ್ತು ಓದು, ಬರಹ ಕೌಶಲ್ಯಗಳನ್ನು ತಮ್ಮ ಜೀವನ ಸುಧಾರಣೆಗೆ ಬಳಸಿಕೊಳ್ಳುವುದು. ಇದು ರಾಷ್ಟ್ರವನ್ನು ಆರ್ಥಿಕವಾಗಿ ಬೆಳೆಯಲು ಮತ್ತು ಸಂಪದಭಿವೃದ್ಧಿಯಾಗಲು ನೆರವಾಗುತ್ತದೆ.

ಶಿಕ್ಷಣವೆಂದರೆ ಜ್ಞಾನ ಸಂಪಾದನೆಗೆ ವಿವಿಧ ರೀತಿಯ ವಿಷಯಗಳನ್ನು ಓದುವುದು ಮತ್ತು ಅರ್ಥಮಾಡಿಕೊಳ್ಳುವುದು ಹಾಗೂ ಅದನ್ನು ತಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವುದು. ಶಿಕ್ಷಣವೆಂದರೆ ಬರೀ ಪುಸ್ತಕದ ಜ್ಞಾನವಲ್ಲದೇ ಒಂದು ವಿಷಯವನ್ನು ಪ್ರಾಯೋಗಿಕವಾಗಿ ಕಲಿಯುವುದು. ಶಿಕ್ಷಣವೆಂದರೆ ಶಾಲೆಗಳಿಗೆ ಮತ್ತು ಕಾಲೇಜುಗಳಿಗೆ ದಿನವೂ ಹಾಜರಾಗಿ ಪರೀಕ್ಷೆಗಳಿಗೆ ಬರೆಯುವುದಲ್ಲ. ನಮ್ಮ ಜೀವನಕ್ಕೆ ಸಂಬಂಧಿಸಿದ ಜ್ಞಾನವನ್ನು ಸಂಗ್ರಹಿಸುವುದು ಶಿಕ್ಷಣ.

ರೋಬೋಟ್ ಕೂಡ ಓದುತ್ತದೆ ಮತ್ತು ಬರೆಯುತ್ತದೆ. ಆದರೆ ಮಾನವ ಜೀವಿ ಜ್ಞಾನವನ್ನು ಬುದ್ಧಿವಂತಿಕೆಯಿಂದ ಬಳಸುತ್ತಾನೆ. ಶಿಕ್ಷಣವನ್ನು ನಮ್ಮ ಜೀವನ ಸುಧಾರಿಸಿಕೊಳ್ಳುವುದಕ್ಕೆ  ಮಾತ್ರವಲ್ಲದೇ ಇತರರ ಜೀವನ ಸುಧಾರಣೆಗೆ ಬಳಸಬಹುದು.
 

Recent Comments

Leave Comments

footer
Top