• 20 January 2019 07:04
Jai Kannada
Jai Kannada
Blog single photo
January 13, 2019

ಸಿಎಂ ಹೇಳಿದ್ದನ್ನೇ ಪ್ರಧಾನಿ ಹೇಳಿದ್ದಾರೆ: ಯಡಿಯೂರಪ್ಪ ಪ್ರತಿಕ್ರಿಯೆ 

ನವದೆಹಲಿ: ದೆಹಲಿಯಲ್ಲಿ ಬಿಜೆಪಿ ಶಾಸಕರು ನಾಳೆಯೂ ಉಳಿದುಕೊಳ್ಳಬೇಕೆಂಬ ಯಡಿಯೂರಪ್ಪ ಕಟ್ಟಪ್ಪಣೆ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, 
 ನಮ್ಮ ಶಾಸಕರಿಗೆ ಏನು ಹೇಳಬೇಕೊ ಅದನ್ನು ಹೇಳುತ್ತೇವೆ ಎಂದಿದ್ದಾರೆ.  ಅತೃಪ್ತ ಕೈಶಾಸಕರ ಜತೆ ಸಂಪರ್ಕವಿಲ್ಲ ಎಂದೂ ಯಡಿಯೂರಪ್ಪ ಹೇಳಿದರು. ಈ ನಡುವೆ ಉಮೇಶ್ ಜಾಧವ್ ಬೆಂಬಲಿಗರ ಜತೆ ಬಿಜೆಪಿಗೆ ಸೇರುವ ಬಗ್ಗೆ ಕಳೆದ ಒಂದು ತಿಂಗಳಿಂದ ಕಾರ್ಯಕರ್ತರ ಜತೆ, ಆಪ್ತರ ಜತೆ  ಚರ್ಚೆ ನಡೆಸಿದ್ದಾರೆಂದು ಗೊತ್ತಾಗಿದೆ.

ಜಾಧವ್ ಬಿಜೆಪಿಗೆ ಸೇರುವುದು ಬೇಡ ಒಂದು ಬಣ ಹೇಳಿದರೆ, ಇನ್ನೊಂದು ವರ್ಗ ಸೇರುವುದಾದರೆ ಸೇರಿ ಎಂದು ಹೇಳುತ್ತಿದೆ.  ನವದೆಹಲಿಗೆ ಕೆಲವು  ಕಾಂಗ್ರೆಸ್ ಶಾಸಕರು ಬಂದಿದ್ದಾರಂತಲ್ಲ ಎಂಬ ಪ್ರಶ್ನೆಗೆ ನವದೆಹಲಿಗೆ ಯಾರು ಬಂದಿದ್ದಾರೆಂದೇ ನನಗೆ ಗೊತ್ತಿಲ್ಲ ಎಂದು ಯಡಿಯೂರಪ್ಪ ಪ್ರತಿಕ್ರಿಯಿಸಿದರು.

ಸಿಎಂರನ್ನು ಕ್ಲರ್ಕ್ ರೀತಿ ನಡೆಸಿಕೊಳ್ಳುತ್ತಿದ್ದಾರೆಂಬ ಹೇಳಿಕೆಗೆ ಸಿಎಂ ಹೇಳಿದ್ದನ್ನೇ ಪ್ರಧಾನಿ ಹೇಳಿದ್ದಾರೆ. ಪ್ರಧಾನಿ ಮೋದಿ ಊಹಾಪೋಹದಲ್ಲಿ ಮಾತನಾಡಲ್ಲ. ಪತ್ರಿಕಾವರದಿಗಳನ್ನು ಅನುಸರಿಸಿ ಅವರು ಹೇಳಿಕೆ ನೀಡಿದ್ದಾರೆಂದು ಯಡಿಯೂರಪ್ಪ ನುಡಿದರು.  ಎಂದಾದರೂ ಕುಮಾರಸ್ವಾಮಿ ತಾವು ಹೇಳಿದ್ದನ್ನು ಒಪ್ಪಿಕೊಂಡಿದ್ದಾರಾ ಎಂದು ಪ್ರಶ್ನಿಸಿದರು.  

Recent Comments

Leave Comments

footer
Top