• 24 March 2019 12:43
Jai Kannada
Jai Kannada
Blog single photo
January 13, 2019

ಕಾಂಗ್ರೆಸ್ ಕೆಲವು ಶಾಸಕರು ದೆಹಲಿಗೆ: ಆಪರೇಷನ್ ಕಮಲದ ಭೀತಿ 

 ನವದೆಹಲಿ: ಬಿಜೆಪಿ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿದ ರಾಜ್ಯ ನಾಯಕರಿಗೆ  ಇಂದು ಸಭೆ ಮುಗಿದ ಬಳಿಕ ನಾಳೆಯೂ ದೆಹಲಿಯಲ್ಲಿಯೇ ಇರುವಂತೆ ಬಿಜೆಪಿ ನಾಯಕ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಯಾರು ಕೂಡ ಬೆಂಗಳೂರಿಗೆ ಹೋಗಲು ಟಿಕೆಟ್ ಬುಕ್ ಮಾಡಬಾರದು ಎಂದು ಸೂಚಿಸಲಾಗಿದೆ.

 ಇದರ ಜತೆಗೆ ಕಾಂಗ್ರೆಸ್‌ನ ಕೆಲವು ಶಾಸಕರು ದೆಹಲಿಗೆ ಬರುತ್ತಿದ್ದಾರೆಂಬ ಸುದ್ದಿ ಹಲವು ಅನುಮಾನಗಳಿಗೆ ದಾರಿ ಕಲ್ಪಿಸಿದೆ.  ನಾಗೇಂದ್ರ ಸೇರಿದಂತೆ ಕೆಲವು ಶಾಸಕರು ದೆಹಲಿಗೆ ಸ್ಥಳಾಂತರಗೊಂಡಿದ್ದು ಅತೃಪ್ತ ಶಾಸಕರು ಬಿಜೆಪಿ ಮುಖಂಡರನ್ನು ಸಂಪರ್ಕಿಸುವ ಯತ್ನ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಕೆಲವು ಕಾಂಗ್ರೆಸ್ ಶಾಸಕರು ವರಿಷ್ಠರ ಕರೆಯನ್ನು ಸ್ವೀಕರಿಸುತ್ತಿಲ್ಲವೆಂದು ಹೇಳಲಾಗುತ್ತಿದೆ.

ಈ ನಡುವೆ ಬಿಜೆಪಿ ವರಿಷ್ಠರು ಆಪರೇಷನ್ ಕಮಲಕ್ಕೆ ಅನುಮತಿ ನೀಡುವುದು ಮಾತ್ರ ಬಾಕಿವುಳಿದಿದೆ ಎಂದು ಹೇಳಲಾಗುತ್ತಿದೆ. ಅತೃಪ್ತ ಕಾಂಗ್ರೆಸ್ ಶಾಸಕರ ಸಂಪರ್ಕಕ್ಕೆ ಸಿಎಂ ಯತ್ನಿಸಿದರೂ ದೂರವಾಣಿ ಕರೆ ಸ್ವೀಕರಿಸುತ್ತಿಲ್ಲವೆಂದು ಗೊತ್ತಾಗಿದೆ.

Recent Comments

Leave Comments

footer
Top