• 20 March 2019 19:35
Jai Kannada
Jai Kannada
Blog single photo
January 12, 2019

ಯೆಮೆನ್ ಸೇನಾ ಪರೇಡ್ ಮೇಲೆ ಡ್ರೋಣ್ ದಾಳಿಗೆ 6 ಸೈನಿಕರ ಬಲಿ

 ಯೆಮೆನ್ ಸೇನಾಪರೇಡ್ ಮೇಲೆ ಭಯೋತ್ಪಾದಕರು ನಡೆಸಿದ ಡ್ರೋಣ್ ದಾಳಿಯಿಂದ ಸೇನಾಧಿಕಾರಿ ಸೇರಿ 6 ಸೈನಿಕರು ಸ್ಥಳದಲ್ಲೇ ಸತ್ತಿರುವ ಭೀಕರ ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ.

.ಲಾಹಜ್ ಪ್ರಾಂತ್ಯದ ಅಲ್ ಆನಂದ್ ನೆಲೆಯ ವೇದಿಕೆಯಲ್ಲಿ ಉನ್ನತಾಧಿಕಾರಿಗಳು ಪರೇಡ್ ವೀಕ್ಷಿಸುತ್ತಿದ್ದಾಗ ಡ್ರೋಣ್ ಸ್ಫೋಟಿಸಿತು. ಸೇನೆಯ ಉಪ ಮುಖ್ಯಸ್ಥ ಸಾಲೆ ಅಲ್ ಜಿಂದಾನಿ ಮತ್ತು ಲಾಹಜ್ ಗವರ್ನರ್ ಅಹ್ಮದ್ ಅಲ್ ತುರ್ಕಿ ಈ ದಾಳಿಯಲ್ಲಿ ಗಾಯಗೊಂಡಿದ್ದಾರೆ.

ಯೆಮೆನ್ ಶಿಯೈಟ್ ಹೌಥಿ ಬಂಡುಕೋರರ ದಾಳಿಯಲ್ಲಿ 6 ಸೈನಿಕರು ನಿರ್ದಯವಾಗಿ ಹತ್ಯೆಯಾಗಿದ್ದು, ಅರಬ್ಬಿನ ಬಡ ರಾಷ್ಟ್ರವು ಡ್ರೋನ್ ಸಮರಭೂಮಿಗಳಲ್ಲಿ ಒಂದಾಗಿದೆ ಎಂದು ತೋರಿಸುತ್ತದೆ. ಬಂಡುಕೋರರ ವಿರುದ್ಧ ಹೋರಾಡುತ್ತಿರುವ ಸೌದಿ ನೇತೃತ್ವದ ಪಡೆ ಮತ್ತು ಅಮೆರಿಕ ಡ್ರೋಣ್‌ಗಳನ್ನು ಕಣ್ಗಾವಲು ಮತ್ತು ದಾಳಿಗಳಿಗೆ ಬಳಸುತ್ತಿದೆ. ಅಮೆರಿಕ ಅಮೆರಿಕ ನಿರ್ಮಿತ ಡ್ರೋನ್ ಬಳಸುತ್ತಿದೆ ಮತ್ತು ಸಮ್ಮಿಶ್ರ ಕೂಟಕ್ಕೆ ಚೀನ ಡ್ರೋನ್ ಪೂರೈಕೆ ಮಾಡುತ್ತಿದೆ. ಆದರೆ ಹೌಥ ಬಂಡುಕೋರರಿಗೆ  ಡ್ರೋನ್ ಪೂರೈಸುತ್ತಿರುವುದು ಯಾರು ಎನ್ನುವುದೇ ನಿಗೂಢವಾಗಿದೆ.

 ಡ್ರೋನ್ ದಾಳಿಯ ವಿಡಿಯೊ

Recent Comments

Leave Comments

footer
Top