Jai Kannada
Jai Kannada
Blog single photo
January 12, 2019

ಚೋರ್ ದೇಶದಲ್ಲಿರಲಿ, ವಿದೇಶದಲ್ಲಿರಲಿ ಈ ಚೌಕಿದಾರ ಬಿಡೋಲ್ಲ: ಮೋದಿ ಎಚ್ಚರಿಕೆ 

 ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧಿವೇಶನ ಉದ್ದೇಶಿಸಿ ನವದೆಹಲಿಯ ರಾಮಲೀಲಾ ಮೈದಾನದಲ್ಲಿ  ಭಾಷಣ ಮಾಡುತ್ತಿದ್ದ ಪ್ರಧಾನಿ  ನರೇಂದ್ರ ಮೋದಿ, ಹಿಂದಿನ ಸರ್ಕಾರದ ಭ್ರಷ್ಟಾಚಾರವನ್ನು, ನಿಧಾನಗತಿಯ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿ ವಾಗ್ದಾಳಿ ಮಾಡಿದರು.  ಬ್ಯಾಂಕುಗಳಿಂದ ಕೋಟ್ಯಂತರ ರೂ. ಸಾಲಗಳನ್ನು ನೀಡಿ ಸಂಕಷ್ಟಕ್ಕೆ ಗುರಿಮಾಡಿದರೆಂದು ಆರೋಪಿಸಿದರು. 

ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿ,  ತಮ್ಮ ಸರ್ಕಾರದ ಯೋಜನೆಗಳ ಹೆಸರು ಬದಲಿಸಿದ್ದಾರೆಂದು ಆರೋಪಿಸಲಾಗಿದೆ ನನ್ನ ಹೆಸರಲ್ಲಿ ಯೋಜನೆಗಳಿವೆಯಾ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದರು.ಕೇಂದ್ರ ಸರ್ಕಾರದ ಯೋಜನೆಗಳಿಗೆ ನನ್ನ ಹೆಸರು ಇಟ್ಟಿಲ್ಲ ಎಂದು ಮೋದಿ ಸ್ಪಷ್ಟಪಡಿಸಿದರು.ಆದರೆ ಹಿಂದಿನ ಸರ್ಕಾರ ಅವರ ಪಕ್ಷದವರ ಹೆಸರು ಇಟ್ಟಿದೆ ಎಂದು ಮೋದಿ ವ್ಯಂಗ್ಯವಾಡಿದರು.

ಕಳೆದ ಸರ್ಕಾರಗಳು ಬಡವರಿಗೆ ಮನೆಗಳನ್ನು ನೀಡುತ್ತಿದ್ದರು. ವಿದ್ಯುತ್ ಸಂಪರ್ಕವನ್ನು ನಿಧಾನಗತಿಯಲ್ಲಿ ಒದಗಿಸುತ್ತಿದ್ದರು. 10 ವರ್ಷ ಕಳೆದರೂ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಸಿಗುತ್ತಿರಲಿಲ್ಲ. ಜೊತೆಗೆ ಸಬ್ಸಿಡಿ ಹಣ ಕೂಡ ಜನರಿಗೆ ಸಿಗುತ್ತಿರಲಿಲ್ಲ.ನಾಲೆಗಳನ್ನು ನಿರ್ಮಿಸುತ್ತಿದ್ದರು, ಆದರೆ ರೈತರ ನಾಲೆಗಳಲ್ಲಿ ನೀರು ಹರಿಯುತ್ತಿರಲಿಲ್ಲ.

ಗ್ಯಾಸ್ ಸಂಪರ್ಕದ ಕನಸು ಕೂಡ ನನಸು ಆಗುತ್ತಿರಲಿಲ್ಲ. ಕಾಂಗ್ರೆಸ್ ಗಂಭೀರವಾದ ವಿಶ್ವಾಸದ್ರೋಹ ಮಾಡಿದೆ ಎಂದು ಮೋದಿ ವಾಗ್ದಾಳಿ ಮಾಡಿದರು. ಶೇ. 10ರಷ್ಟು ಮೀಸಲಾತಿಯಿಂದ ಯುವಕರಿಗೆ ಅವಕಾಶ ಸಿಗಲಿದೆ ಎಂದು ಮೋದಿ ಭರವಸೆ ನೀಡಿದರು. ಚೋರ್ ದೇಶದಲ್ಲಿ ಅಥವಾ ವಿದೇಶದಲ್ಲಿದ್ದರೂ ಈ ಚೌಕಿದಾರ ಬಿಡುವುದಿಲ್ಲ ಎಂದು ಮೋದಿ ಎಚ್ಚರಿಸಿದರು.  
 ಕ್ಲರ್ಕ್ ರೀತಿಯಲ್ಲಿ ಮುಖ್ಯಮಂತ್ರಿ
ಕರ್ನಾಟಕದಲ್ಲಿ ಮೈತ್ರಿ ಮೂಲಕ ಸರ್ಕಾರ ರಚನೆ ಮಾಡಿದ್ದಾರೆ. ಆದರೆ ಕರ್ನಾಟಕದಲ್ಲಿ ಕ್ಲರ್ಕ್ ರೀತಿಯಲ್ಲಿ ಮುಖ್ಯಮಂತ್ರಿಯನ್ನು ನಡೆಸಿಕೊಳ್ತಾರೆ ಎಂದು ಮೋದಿ ವ್ಯಂಗ್ಯವಾಗಿ ಹೇಳಿದರು. 

Recent Comments

Leave Comments

footer
Top