• 20 March 2019 18:53
Jai Kannada
Jai Kannada
Blog single photo
January 12, 2019

ಸೇತುವೆಯಿಂದ ನದಿಗೆ ಬಿದ್ದ ಬೊಲೆರೊ ವಾಹನ : ಮಹಿಳೆ ಸಾವು, ಮೂವರು ಪಾರು  

ಕಾರ್ಕಳ: ಮಹೀಂದರ್ ಬೊಲೆರೊ ವಾಹನದಲ್ಲಿ ವಿವಾಹ ಸಮಾರಂಭಕ್ಕೆ ಹೊರಟಿದ್ದ ಕುಟುಂಬವೊಂದಕ್ಕೆ ದುರ್ದಿನ ಕಾದುಕೊಂಡಿತ್ತು. ಅವರು ಪ್ರಯಾಣಿಸುತ್ತಿದ್ದ ವಾಹನ ಸೇತುವೆಯಿಂದ ಸೀದಾ ನದಿಗೆ ಬಿದ್ದು, ಬೋಲಾ ಗ್ರಾಮಕ್ಕೆ ಸೇರಿದ ಡಯಾನ(45) ಎಂಬ ಮಹಿಳೆ ಜೀವ ಕಳೆದುಕೊಂಡಿದ್ದಾರೆ.

ಬೋಲಾ ಗ್ರಾಮದ ಪಡವುನ ಸ್ಟಾನಿ ಮಸ್ಕರನ್ನಾಸ್ ಮಂಗಳೂರಿನಲ್ಲಿ ಮದುವೆ ಸಮಾರಂಭಕ್ಕೆ ತಮ್ಮ ಕುಟುಂಬದ ಜತೆ ಹೊರಟಿದ್ದರು. ಅವರ ಜತೆ ಪತ್ನಿ ಡಯಾನ, ಮಕ್ಕಳಾದ ಶೆಲ್ಡನ್ ಮತ್ತು ಅರ್ಮಾನ್ ವಾಹನದಲ್ಲಿದ್ದರು.

ಸಂಕಲಕಾರಿಯಾ ಬಳಿ ಸೇತುವೆ ದಾಟುವಾಗ ವಾಹನ ಪಲ್ಟಿಯಾಗಿ ಶಾಂಬವಿ ನದಿಗೆ ಉರುಳಿ ಬಿದ್ದಿತ್ತು. ಸ್ಥಳೀಯರು ನದಿಗೆ ವಾಹನ ಉರುಳುತ್ತಿರುವುದನ್ನು ಕಂಡು ಕೂಡಲೇ ನದಿಗೆ ಹಾರಿ ಪ್ರಾಣ ಉಳಿಸಿಕೊಳ್ಳಲು ಸೆಣಸುತ್ತಿದ್ದ ಮೂವರನ್ನು ರಕ್ಷಿಸಿದರು. ಆದಾಗ್ಯೂ ಡಯಾನಳನ್ನು ರಕ್ಷಿಸುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು. 
 

Recent Comments

Leave Comments

footer
Top