Jai Kannada
Jai Kannada
Blog single photo
January 12, 2019

ಬಿಎಸ್‌ಪಿ, ಎಸ್‌ಪಿ ಮೈತ್ರಿ: ತಲಾ 38 ಸೀಟುಗಳ ಹಂಚಿಕೆ 

ಲಖನೌ: ಲೋಕಸಭೆ ಚುನಾವಣೆಯಲ್ಲಿ ನಮ್ಮ ಮೈತ್ರಿ ಅಂತಿಮವಾಗಿದೆ. ತಲಾ 38 ಕ್ಷೇತ್ರಗಳಲ್ಲಿ ಬಿಎಸ್‌ಪಿ ಮತ್ತು ಎಸ್‌ಪಿ ಪಕ್ಷಗಳು ಸ್ಪರ್ಧಿಸುತ್ತವೆ. ಉಳಿದ ನಾಲ್ಕು ಸೀಟುಗಳನ್ನು ಇತರೆ ಪಕ್ಷಗಳಿಗೆ ಬಿಟ್ಟುಕೊಟ್ಟಿದ್ದೇವೆ ಎಂದು ಬಿಎಸ್‌ಪಿ ಮುಖಂಡೆ ಮಾಯಾವತಿ ಲಖನೌದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಎರಡೂ ಪಕ್ಷಗಳ ನಡುವೆ 78 ಕ್ಷೇತ್ರಗಳ ಹಂಚಿಕೆಯಾಗಿದೆ ಎಂದು ಅವರು ನುಡಿದರು.  ಅಮೇಥಿ ಮತ್ತು ರಾಯ್ ಬರೇಲಿ ಕ್ಷೇತ್ರಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿರುವುದಾಗಿ ಅವರು ಹೇಳಿದರು. ಉತ್ತರಪ್ರದೇಶದಲ್ಲಿ ಬಿಜೆಪಿಗೆ ಹೆಡೆಮುರಿ ಕಟ್ಟುತ್ತೇವೆ ಎಂದು ಮಾಯಾವತಿ ಖಾರವಾಗಿ ಹೇಳಿದರು.
ಕಲ್ಲಿನೇಟಿಗೆ ಎಕೆ 47 ಗನ್ನಿನ ಉತ್ತರ
ನಿಮ್ಮ ಪಕ್ಷದ ನಾಯಕರ ಕಲ್ಲಿನೇಟಿಗೆ ಎಕೆ 47 ಗನ್ನಿನ ಮೂಲಕ ಉತ್ತರಿಸುತ್ತೇನೆ. ಎಲ್ಲರ ಬಾಯಿ ಮುಚ್ಚಿಸ್ತೇನೆ ಎಂದು ಬಿಎಸ್‌ಪಿಯ ಜಗತ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾನೆ.  ರಾಜಸ್ಥಾನದಲ್ಲಿ ಬಿಎಸ್‌ಪಿ ಮುಖಂಡರಿಗೆ ಬೆದರಿಕೆ ವಿಚಾರವಾಗಿ ಅವರು ಭಾಷಣ ಮಾಡುತ್ತಿದ್ದರು

ರಾಮಗಢ ಕ್ಷೇತ್ರದಲ್ಲಿ ಮಾತನಾಡುತ್ತಿದ್ದ ಜಗತ್ ಸಿಂಗ್, ಅಶೋಕ್ ಜಿ, ಮೋದಿಜೀ, ವಸುಂಧರಾಜೀ ಮುಂದೆ ಬನ್ನಿ, ನಿಮ್ಮೆಲ್ಲರ ಬಾಯಿ ಮುಚ್ಚಿಸ್ತೀನಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

Recent Comments

Leave Comments

footer
Top