• 20 January 2019 06:16
Jai Kannada
Jai Kannada
Blog single photo
January 12, 2019

ಸಾಲಮನ್ನಾ: ಮೋದಿ ಲಾಲಿಪಾಪ್ ಹೇಳಿಕೆ ಸರಿಯಾಗಿದೆ- ಅಶೋಕ್ 

ನವದೆಹಲಿ: ರಾಜ್ಯಸರ್ಕಾರದ ಸಾಲಮನ್ನಾ ಲಾಲಿ ಪಾಪ್ ಎಂಬ ಪ್ರಧಾನಿ ಮೋದಿ ಹೇಳಿಕೆ ಸರಿಯಾಗಿದೆ. ರೈತರ ಸಾಲ ಮನ್ನಾ ಆಗಿದೆ ಎಂದು ರಾಜ್ಯಸರ್ಕಾರ ಬೊಗಳೆ ಬಿಡುತ್ತಿದೆ. ಆದರೆ ಸಾಲ ಮನ್ನಾ ಮಾಡಲು ಸರ್ಕಾರದ ಬಳಿಯೇ ಹಣವಿಲ್ಲ ಎಂದು ಮಾಜಿ ಡಿಸಿಎಂ ಅಶೋಕ್ ದೆಹಲಿಯಲ್ಲಿ ಹೇಳಿದ್ದಾರೆ.

ರೈತರ ಸಾಲ ಎಷ್ಟಿದೆ ಎಂದು ರೈತರನ್ನೇ ಕೇಳುವ ಸರ್ಕಾರ ಇದಾಗಿದೆ ಎಂದು ಅಶೋಕ್ ಲೇವಡಿ ಮಾಡಿದರು. ಸಾಲಬಾಧೆಯಿಂದ 250ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾಲ ಮನ್ನಾ ಆಗಿದ್ದರೆ ರೈತರೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಅಶೋಕ್ ಪ್ರಶ್ನಿಸಿದರು.
 

Recent Comments

Leave Comments

footer
Top