Jai Kannada
Jai Kannada
Blog single photo
January 12, 2019

 ಬೇಸರಗೊಂಡಿದ್ದ ಮಧು ಬಂಗಾರಪ್ಪಗೆ ದೇವೇಗೌಡರ ಓಲೈಕೆ 

ಶಿವಮೊಗ್ಗ: ಲೋಕಸಭಾ ಉಪಚುನಾವಣೆಯಲ್ಲಿ ಪರಾಭವಗೊಂಡಿದ್ದ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಅವರು,  ವರಿಷ್ಠರು ತಮ್ಮ ಸೋಲಿನ ಬಗ್ಗೆ ಅವರ ಆಪ್ತರಲ್ಲಿ ಮಾಡಿಕೊಂಡ ವಿಶ್ಲೇಷಣೆಯಿಂದ ಬೇಸರಗೊಂಡಿದ್ದು, ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸದೇ ದೂರವಿದ್ದರು.

ಈ ಕುರಿತು ಎಚ್‌ಡಿಕೆ ಕರೆಗಳಿಗೂ ಉತ್ತರಿಸದೇ ಮಧು ಬಂಗಾರಪ್ಪ ಸುಮ್ಮನಿದ್ದರು. ಈ ಹಿನ್ನೆಲೆಯಲ್ಲಿ ಸ್ವತಃ ಮಾಜಿ ಪ್ರಧಾನಿ ದೇವೇಗೌಡರೇ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದು ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.

ಪಕ್ಷದ ಮುಖಂಡರ ವರ್ತನೆಯಿಂದ ಬೇಸರವಾಗಿದ್ರೆ ಅದನ್ನು ಸರಿಪಡಿಸೋಕೆ ನಾನಿದ್ದೇನೆ ಎಂದು ದೇವೇಗೌಡರು ಭರವಸೆ ನೀಡಿದ್ದಾರೆ. 

Recent Comments

Leave Comments

footer
Top