• 20 January 2019 06:48
Jai Kannada
Jai Kannada
Blog single photo
January 12, 2019

ಪ್ರತಿಪಕ್ಷಗಳ ಮಹಾಘಟಬಂಧನ್ ಯೋಜನೆ ಯುಪಿಯಲ್ಲಿ ಟುಸ್ 


ಲಕ್ನೊ:  ಇಂದು 2019ರ ಲೋಕಸಭೆ ಚುನಾವಣೆ ಎದುರಿಸೋದಕ್ಕೆ ಕಾಂಗ್ರೆಸ್ ಬಿಟ್ಟು ಎರಡು ಪಕ್ಷಗಳ ನಡುವೆ ಮಾತ್ರ  ಮೈತ್ರಿಯಾಗಲಿದ್ದು, ಪ್ರತಿಪಕ್ಷಗಳ ಮಹಾಘಟಬಂಧನ್ ಯೋಜನೆ ತಲೆಕೆಳಗಾಗಿದೆ. ಉತ್ತರಪ್ರದೇಶದ ಬದ್ಧ ವೈರಿಗಳಾದ ಎಸ್‌ಪಿ ಮತ್ತು ಬಿಎಸ್ಪಿ ಪಕ್ಷಗಳು ಚುನಾವಣೆಯಲ್ಲಿ ಸೀಟು ಹಂಚಿಕೆ ಬಗ್ಗೆ ಅಧಿಕೃತ ಪ್ರಕಟಣೆ ನೀಡಲಿದ್ದಾರೆ.

ಎಸ್ಪಿಗೆ 37 ಸ್ಥಾನಗಳು ಮತ್ತು ಬಿಎಸ್ಪಿಗೆ 37 ಸ್ಥಾನಗಳನ್ನು ನೀಡುವ ನಿರೀಕ್ಷೆಯಿದೆ. ಈ ನಡುವೆ ಕಾಂಗ್ರೆಸ್ ಕೂಡ ಪ್ರತ್ಯೇಕವಾಗಿ 30 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಕಾಂಗ್ರೆಸ್ ಬಿಟ್ಟು ಇವೆರಡು ಪಕ್ಷಗಳ ಮೈತ್ರಿಯಿಂದಾಗಿ ಪ್ರತಿಪಕ್ಷಗಳ ಮಹಾಘಟಬಂಧನ್ ಯೋಜನೆ ತಲೆಕೆಳಗಾಗಿದೆ.

ಕರ್ನಾಟಕದಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾದ ಕೂಡಲೇ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲು ಮಾಯಾವತಿ, ಸೋನಿಯಾ ಮುಂತಾದ ಮುಖಂಡರು ಆಗಮಿಸಿದ್ದರು. ಆಗ ಈ ನಾಯಕರೆಲ್ಲಾ ಪರಸ್ಪರ ಕೈಜೋಡಿಸಿ ಮಹಾಘಟಬಂಧನ್‌ಗೆ ಅಭೂತಪೂರ್ವ ಬೆಂಬಲ ನೀಡಿದ್ದರು. ಈಗ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನೇ ಕೈಬಿಟ್ಟಿರುವುದರಿಂದ ಮಹಾಘಟಬಂಧನ್ ಯೋಜನೆ ಉತ್ತರಪ್ರದೇಶದಲ್ಲಿ ಟುಸ್ ಆಗಿದೆ.

Recent Comments

Leave Comments

footer
Top