Jai Kannada
Jai Kannada
Blog single photo
January 11, 2019

 ಮದುವೆ ಮನೆಯಲ್ಲಿ ವರನ ರೌದ್ರಾವತಾರ

.ಮದುವೆ ಮನೆಯಲ್ಲಿ ವಧು, ವರರನ್ನು ರೇಗಿಸುವುದು ಸಾಮಾನ್ಯ ಸಂಗತಿ. ವಧು-ವರರು ಊಟಕ್ಕೆ ಕುಳಿತಿದ್ದಾಗ ವರನಿಗೆ ನೀರು, ಆಹಾರ ಬಡಿಸದೇ ಸತಾಯಿಸಲಾಯಿತು. ಒಂದೇ ಎಲೆಯಲ್ಲಿ ಊಟಮಾಡುತ್ತಿದ್ದ ವಧುವರರ ಎಲೆಗೆ ಹಾಕಿದ್ದ ಅನ್ನವನ್ನು ವಧು ತನ್ನೆಡೆಗೆ ಸರಿಸಿಕೊಂಡಳು.

ಎಷ್ಟು ಹೊತ್ತಾದರೂ ತನಗೆ ಅನ್ನ ಹಾಕದೇ ಸತಾಯಿಸಿದಾಗ ವರ ಆಕ್ರೋಶಗೊಂಡ. ವರ ರೌದ್ರಾವತಾರ ತಾಳಿ ಊಟದ ಟೇಬಲ್ಲನ್ನೇ ಕೆಳಕ್ಕೆ ಬೀಳಿಸಿ ಹೋಗಿದ್ದನ್ನು ಕಂಡು ವರನ ಸ್ನೇಹಿತರು ಬೆಚ್ಚಿಬಿದ್ದರು. ಕೇರಳದಲ್ಲಿ ನಡೆದ ಈ ಘಟನೆ ವೈರಲ್ ಆಗಿದೆ.


 

Recent Comments

Leave Comments

footer
Top