• 20 January 2019 06:15
Jai Kannada
Jai Kannada
Blog single photo
January 11, 2019

ಅಮೆಜಾನ್ ಮಾಲೀಕ ಜೆಫ್ ಬೆಜೋಸ್ ವಿಚ್ಛೇದಿತ ಪತ್ನಿಗೆ ಪರಿಹಾರ 4 ಲಕ್ಷ ಕೋಟಿ ರೂ. 

ನ್ಯೂಯಾರ್ಕ್ : ಅಮೆಜಾನ್ ಬಾಸ್ ಜೆಫ್ ಬೆಜೋಸ್  ವೈವಾಹಿಕ ಜೀವನ ಮುರಿದುಬಿದ್ದಿದ್ದು, ತಮ್ಮ ಸ್ನೇಹಿತನ ಮಾಜಿ ಪತ್ನಿಯನ್ನು ವರಿಸಲಿದ್ದಾರೆ. ತಮ್ಮ ಮೊದಲ ಪತ್ನಿ ಮೆಕೆಂಜಿ ಬೆಜೋಸ್‌ಗೆ ವಿಚ್ಛೇದನ ನೀಡುತ್ತಿದ್ದು, ಅವಳಿಗೆ 4 ಲಕ್ಷ ಕೋಟಿ ಪರಿಹಾರ ನೀಡಲಿದ್ದಾರೆ. 
ಸುಮಾರು 25 ವರ್ಷಗಳ ವೈವಾಹಿಕ ಜೀವನದ ಬಳಿಕ ಜೆಫ್ ಬಿಜೋಸ್ ತನ್ನ ಪತ್ನಿಗೆ ವಿಚ್ಛೇದನ ನೀಡಿದ್ದಾರೆ. ಟ್ವಿಟರ್‌ನಲ್ಲಿ ಜಂಟಿ ಹೇಳಿಕೆಯೊಂದರಲ್ಲಿ ವಿಚ್ಛೇದನವನ್ನು ಈ ಜೋಡಿ ಪ್ರಕಟಿಸಿದ್ದಾರೆ.

. 25 ವರ್ಷಗಳ ಹಿಂದೆ ಆರಂಭವಾದ ಅಮೆಜಾನ್ ಕಂಪನಿ ಇಂದು ವಿಶ್ವದ ಅತ್ಯಂತ ಮೌ    ಲ್ಯಯುತ ಕಂಪನಿಯಾಗಿ ಬೆಳೆದಿದೆ. ಅಮೆಜಾನ್ ಸ್ಥಾಪಿಸಿದ ಬೆಜೋಸ್ ಪ್ರಪಂಚದ ಅತ್ಯಂತ ಶ್ರೀಮಂತ.ವ್ಯಕ್ತಿಯಾಗಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೈರ್ ಸೂಚ್ಯಂಕದ ಪ್ರಕಾರ ಅವರ ಅಂದಾಜು ಆಸ್ತಿಯ ಮೌಲ್ಯ 136 ಶತಕೋಟಿ ಡಾಲರ್ . ಬಿಲ್ ಗೇಟ್ಸ್‌ಗಿಂತ 45 ಶತಕೋಟಿ ಮುಂದಿದ್ದಾರೆ.

ಬೆಜೋಸ್ ಅವರು ಫಾಕ್ಸ್ ಟಿವಿ ನಿರೂಪಕಿ ಲಾರೆನ್ ಸಾಂಚೆಜ್‌ರನ್ನು ಪ್ರೀತಿಸುತ್ತಿದ್ದ ತನ್ನ ಸ್ನೇಹಿತನ ಮಾಜಿ ಪತ್ನಿಯನ್ನೇ ವರಿಸಲಿದ್ದಾರೆ.
2013ರಲ್ಲಿ ಮೆಕೆಂಜಿ ಬೆಜೋಸ್ ನ್ಯೂಯಾರ್ಕ್ ಹೆಜ್ ಫಂಡ್ ಉದ್ಯೋಗಕ್ಕೆ ಸಂದರ್ಶನ ನಡೆಸಿದಾಗ ಜೆಫ್‌ರನ್ನು ಭೇಟಿಯಾಗಿದ್ದರು.
ಮೂರು ತಿಂಗಳ ಡೇಟಿಂಗ್ ಬಳಿಕ 1993ರಲ್ಲಿ ವಿವಾಹವಾಗಿದ್ದರು. ಒಂದು ವರ್ಷದ ನಂತರ ಅವರು ಅಮೆಜಾನ್ ಕಂಪನಿಯನ್ನು ಸ್ಥಾಪಿಸಿ ಆರಂಭದಲ್ಲಿ ಆನ್‌ಲೈನ್ ಪುಸ್ತಕ ವ್ಯಾಪಾರ ಸಂಸ್ಥೆಯಾಗಿ ಬೆಳೆದಿತ್ತು.

ಈಗ ಈ ಕಂಪನಿಯು ಈ ವಾಣಿಜ್ಯ ದೈತ್ಯ ಕಂಪನಿಯಾಗಿ ಬೆಳೆದಿದ್ದು, ಅಮೆಜಾನ್ ಮೌಲ್ಯ 797 ಶತಕೋಟಿ ಡಾಲರ್‌ಗಳಿಂದ ಕೂಡಿದೆ.

Recent Comments

Leave Comments

footer
Top