• 20 March 2019 18:54
Jai Kannada
Jai Kannada
Blog single photo
January 11, 2019

ಹೃದಯದೋಷದ ಪುತ್ರಿಯನ್ನು ಕೀಟನಾಶಕ ಬೆರೆಸಿ ಕೊಂದ

ಕಾರವಾರ: ಅವನ ಪುತ್ರಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಳು. ಅವಳ ವೈದ್ಯಕೀಯ ವೆಚ್ಚ ಭರಿಸುವುದು ಅವನಿಗೆ ಅಸಾಧ್ಯವಾಗಿ ಕಂಡಿತು. ಬೇರೆ ದಾರಿ ಕಾಣದೇ, ಪುತ್ರಿಯೆಂಬ ಮಮಕಾರವನ್ನು ಇಟ್ಟುಕೊಳ್ಳದೇ ನಿರ್ದಯವಾಗಿ ಅವನು ತನ್ನ ಪುತ್ರಿಗೇ ವಿಷವಿಕ್ಕಿ ಕೊಂದಿರುವ ಬರ್ಬರ ಘಟನೆ ಕಾರವಾರದಲ್ಲಿ ನಡೆದಿದೆ.
ಉತ್ತರಕನ್ನಡದ ಉಮ್ಮಲಚಾಗಿ ಗ್ರಾಮಕ್ಕೆ ಸೇರಿದ ನಾಗರಾಜ ಪೂಜಾರಿ ತನ್ನ 11 ವರ್ಷದ ಪುತ್ರಿ ನಯನಾಗೆ ಕೀಟನಾಶಕ ಬೆರೆಸಿದ ಆಹಾರ ನೀಡಿ, ಹೃದಯಬೇನೆಯಿಂದ ಬಳಲುತ್ತಿದ್ದ ಮಗಳ ಜೀವವನ್ನೇ ತೆಗೆದ. ಬಾಲಕಿ ನಯನ ಕೀಟನಾಶಕ ಬೆರೆತ ಆಹಾರ ಸೇವಿಸಿ ವಾಂತಿ ಮಾಡಲಾರಂಭಿಸಿದಾಗ ಅವನು ಸೀದಾ ಅಲ್ಲಿಂದ ತೆರಳಿದ್ದ.

ಪೊಲೀಸರು ನಾಗರಾಜನಿಗಾಗಿ ಶೋಧ ನಡೆಸಿದ್ದಾರೆ. ಮನೆ ತ್ಯಜಿಸಿದ್ದ ತಾಯಿಯನ್ನು ವಾಪಸು ಕರೆತರುವಂತೆ ನಯನಾ ಕೇಳಿದ್ದಳು. ಈಗಾಗಲೇ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದ ನಾಗರಾಜ ಅವಳ ಬೇಡಿಕೆಯಿಂದ ಕ್ರುದ್ಧನಾಗಿದ್ದ.

ನಯನಾಗೆ ಮೂರು ವರ್ಷಗಳ ಹಿಂದೆ ಹೃದಯ ಕಸಿ ಚಿಕಿತ್ಸೆ ಮಾಡಲಾಗಿತ್ತು. ತನ್ನ ಪುತ್ರಿಯ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗಾಗಿ ಮಾಡಿದ ಸಾಲ ತೀರಿಸುವುದು ಅವನಿಗೆ ಕಷ್ಟವಾಗಿತ್ತು. ಈ ಕುರಿತು ಪತ್ನಿಯ ಜತೆ ಜಗಳವಾಡುತ್ತಿದ್ದ ಮತ್ತು ಕುಡಿತ ಆರಂಭಿಸಿದ್ದರಿಂದ ಪತ್ನಿ ಮನೆ ಬಿಟ್ಟು ಹೋಗಿ ಇನ್ನೊಬ್ಬಳು ಮಗಳ ಜತೆಯಲ್ಲಿದ್ದಳು. 

Recent Comments

Leave Comments

footer
Top