• 20 March 2019 18:57
Jai Kannada
Jai Kannada
Blog single photo
January 11, 2019

ನಾಪತ್ತೆಯಾದ ಮೀನುಗಾರರ ಸುಳಿವು ಲಭ್ಯ: ಎಂ.ಬಿ. ಪಾಟೀಲ್ 

ಬೆಂಗಳೂರು: ಮಲ್ಪೆಯಿಂದ ಆಳಸಮುದ್ರದ ಮೀನುಗಾರಿಕೆಗೆ ತೆರಳಿ ಕಾಣೆಯಾಗಿರುವ ಏಳು ಮೀನುಗಾರರ ಬಗ್ಗೆ ಈಗ ಕೆಲವು ಸುಳಿವುಗಳು ಲಭ್ಯವಾಗಿವೆ ಎಂದು ಗೃಹಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
 ಮೀನುಗಾರಿಕೆ ದೋಣಿಯ ಪತ್ತೆಗೆ ಭಾರತದ ನೌಕಾದಳ ಮತ್ತು ಸಂಬಂಧಿತ ಅಧಿಕಾರಿಗಳು ರೇಡಿಯೊ ತರಂಗಾಂತರದ ನೆರವಿನ ಮೂಲಕ ಹುಡುಕಾಟ ನಡೆಸಿದ್ದಾರೆ. ಇದೊಂದು ಸೂಕ್ಷ್ಮ ವಿಚಾರವಾದ್ದರಿಂದ ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ನಾನು ಈಗಲೇ ನೀಡುವುದಿಲ್ಲ ಎಂದು ಹೇಳಿದ್ದಾರೆ.

 ಕೇಂದ್ರದ ರಕ್ಷಣಾ ಇಲಾಖೆಯಿಂದ ಹೆಚ್ಚಿನ ನೆರವನ್ನು ನಾವು ಕೋರಿದ್ದೇವೆ. ಮಹಾರಾಷ್ಟ್ರದ ಗೃಹಸಚಿವರ ಜತೆಗೂ ಈ ಕುರಿತು ಚರ್ಚಿಸಿ ಅವರ ನೆರವನ್ನು ಕೇಳಿದ್ದೇವೆ ಎಂದು ಪಾಟೀಲ್ ಹೇಳಿದ್ದಾರೆ. 

ಮಲ್ಪೆ ಬಂದರಿನಿಂದ ಸುವರ್ಣ ತ್ರಿಭುಜ ಬೋಟ್‌ನಲ್ಲಿ  ಮಾಲೀಕ ಚಂದ್ರಶೇಖರ್‌ ಕೋಟ್ಯಾನ್‌, ಮೀನುಗಾರರಾದ ಲಕ್ಷ್ಮಣ, ಸತೀಶ್‌, ರವಿ, ಹರೀಶ್‌, ರಮೇಶ್‌, ದಾಮೋದರ್‌  ಡಿ.13ರಂದು ಆಳಸಮುದ್ರದ ಮೀನುಗಾರಿಕೆಗೆ ತೆರಳಿದ್ದರು. ಡಿ.15ರವರೆಗೆ ವಾಸುದೇವ ಬೋಟ್‌ನ ಮೀನುಗಾರರೊಂದಿಗೆ ಸಂಪರ್ಕದಲ್ಲಿದ್ದ ಅವರು ಬಳಿಕ ಸಂಪರ್ಕ ಕಡಿದುಹೋಗಿತ್ತು.

Recent Comments

Leave Comments

footer
Top