Jai Kannada
Jai Kannada
Blog single photo
January 11, 2019

 ಮೆಟ್ರೊ ರೈಲಿನೆದುರು ಹಾರಿ ಯುವಕನ ಆತ್ಮಹತ್ಯೆ ಯತ್ನ 


 ಬೆಂಗಳೂರು: ಕಾಲೇಜು ಮೆಟ್ರೋ ನಿಲ್ದಾಣದ ಬಳಿ ಶುಕ್ರವಾರ 25 ವರ್ಷದ ಯುವಕನೊಬ್ಬ ಮೆಟ್ರೊ ರೈಲು ಬರುತ್ತಿದ್ದಂತೆ ಅದರ ಮುಂದೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಂಭವಿಸಿದೆ. ವೇಣು ಎಂದು ಗುರುತಿಸಲಾದ ಈ ವ್ಯಕ್ತಿ ತಲೆಗೆ ಗಾಯಗಳಾಗಿದ್ದು, ರೈಲು ಅವನ ಮೇಲೆ ಹರಿಯದಿದ್ದರಿಂದ ಅದೃಷ್ಟವಶಾತ್ ಪಾರಾಗಿದ್ದಾನೆ.

ಟೈಲರ್ ಕೆಲಸ ಮಾಡಿಕೊಂಡಿದ್ದ ವೇಣು ಮಾತನಾಡಲು ಅಶಕ್ತನಾಗಿದ್ದು ನಿಮಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.  ಲಾಲ್‌ಬಾಗ್‌ನಿಂದ ಮೆಜೆಸ್ಟಿಕ್ ಕಡೆಗೆ ತೆರಳಿದ್ದ ರೈಲಿನ ಮುಂದೆ ವೇಣು ಜಿಗಿದಿದ್ದ.

ಅವನು ಹಾರುವುದಕ್ಕೆ 2-3 ಸೆಕೆಂಡುಗಳ ಮುಂಚೆ ರೈಲು ನಿಲ್ದಾಣದಲ್ಲಿ ನಿಂತಿದ್ದರಿಂದ ಮತ್ತು ಮೆಟ್ರೊ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರಿಂದ ವೇಣು ಪ್ರಾಣಾಪಾಯದಿಂದ ಬಚಾವಾಗಿದ್ದಾನೆ.

Recent Comments

Leave Comments

footer
Top