• 20 March 2019 18:53
Jai Kannada
Jai Kannada
Blog single photo
January 11, 2019

ಏಕ ದಿನ ಪಂದ್ಯಗಳಿಗೆ ರಿಷಬ್ ಪಂತ್  ಕೈಬಿಟ್ಟಿದ್ದಕ್ಕೆ ಫಾರೂಕ್ ಗರಂ 

ಮುಂಬೈ : ಉತ್ತಮ ಫಾರಂನಲ್ಲಿದ್ದ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ರಿಷಬ್ ಪಂತ್ ಅವರನ್ನು ಆಸೀಸ್ ವಿರುದ್ಧ ಏಕದಿನ ಪಂದ್ಯಗಳಿಗೆ ಡ್ರಾಪ್ ಮಾಡಿ ಬದಲಿಗೆ ಎಂ.ಎಸ್.ಧೋನಿಯನ್ನು ಹಾಕಿಕೊಂಡಿದ್ದು, ಭಾರತದ ಮಾಜಿ ವಿಕೆಟ್ ಕೀಪರ್ ಫಾರೂಕ್ ಇಂಜಿನಿಯರ್ ಅವರಿಗೆ ಬೇಸರ ತರಿಸಿದೆ. ಲಿಮಿಟೆಡ್ ಓವರ್ ತಂಡದಿಂದ ರಿಷಬ್ ಅವರನ್ನು ಕೈಬಿಟ್ಟಿದ್ದೇಕೆಂದು ಅವರು ಪ್ರಶ್ನಿಸಿದ್ದಾರೆ.

ರಿಷಬ್ ಪಂತ್ ಆಸ್ಟ್ರೇಲಿಯಾದಲ್ಲಿ ಆಕರ್ಷಕ ಶತಕವನ್ನು ಬಾರಿಸಿ, ಫಾರೂಕ್ ಎಂಜಿನಿಯರ್ ಯೌವನದ ದಿನಗಳನ್ನು ನೆನಪಿಸಿದ್ದರು. 
ಆಸ್ಟ್ರೇಲಿಯಾದ ಟೆಸ್ಟ್‌ವೊಂದರಲ್ಲಿ 11 ಕ್ಯಾಚ್‌ಗಳನ್ನು ಹಿಡಿದು ಹೊಸ ದಾಖಲೆಯನ್ನು ಪಂಚ್ ಸೃಷ್ಟಿಸಿದ್ದರು.

ನೀವು ವಿಶ್ವಕಪ್‌ಗೆ ಧೋನಿಯನ್ನು ಆಯ್ಕೆ ಮಾಡುತ್ತೀರಾ, ಪಂತ್ ಅವರನ್ನು ಹೇಗೆ ಡ್ರಾಪ್ ಮಾಡುತ್ತೀರಿ, ಅವರು ಚೆನ್ನಾಗಿ ಆಡಿದ್ದಾರೆ ಎಂದು ಮುಂಬೈನ ಕ್ರಿಕೆಟ್ ಕ್ಲಬ್‌ವೊಂದರಲ್ಲಿ ಫಾರೂಕ್ ಕೇಳಿದ್ದಾರೆ.

 

Recent Comments

Leave Comments

footer
Top