• 20 January 2019 06:54
Jai Kannada
Jai Kannada
Blog single photo
January 11, 2019

ಸವ್ಯಸಾಚಿ ದ್ರಾವಿಡ್ ನೋಡಿ ಕಲಿಯಿರಿ: ಪಾಂಡ್ಯಾ, ರಾಹುಲ್‌ಗೆ ಟ್ವೀಟಿಗರ ತರಾಟೆ

ನವದೆಹಲಿ: ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಅಸಭ್ಯ ಹೇಳಿಕೆ ನೀಡಿ ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿರುವ ಪಾಂಡ್ಯಾ ಮತ್ತು ಕೆ.ಎಲ್. ರಾಹುಲ್ ಅವರು ಸವ್ಯಸಾಚಿ ಆಟಗಾರ ದ್ರಾವಿಡ್ ಅವರನ್ನು ನೋಡಿ ಕಲಿಯಲಿ ಎಂದು ಟ್ವೀಟಿಗರು ಹೇಳಿದ್ದಾರೆ. ಪಾಂಡ್ಯಾ ಮತ್ತು ರಾಹುಲ್ ನಡೆಯಿಂದ ಕ್ರಿಕೆಟ್ ಅಭಿಮಾನಿಗಳಿಗೆ ಮಾತ್ರವಲ್ಲ ಬಿಸಿಸಿಐಗೂ ಬೇಸರವಾಗಿದ್ದು, ಆಟಗಾರರ ಮೇಲೆ 2 ಪಂದ್ಯಗಳಿಗೆ ನಿಷೇಧ ಹೇರುವ ಚಿಂತನೆ ನಡೆಸಿದೆ.

ರಾಹುಲ್ ದ್ರಾವಿಡ್ ಅವರಂಥ ಸವ್ಯಸಾಚಿ ಆಟಗಾರರನ್ನು ನೋಡಿ ಈಗಿನ ತಲೆಮಾರಿನ ಯುವಕರು ಕಲಿಯಬೇಕು ಎದು ಸಾಮಾಜಿಕ ಜಾಲಕತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

 ರಾಹುಲ್ ದ್ರಾವಿಡ್ ಅವರಿಗೆ ಸಂದರ್ಶನವೊಂದರಲ್ಲಿ ಯುವತಿಯೊಬ್ಬಳು ಮದುವೆಯಾಗುವ ಪ್ರಪೋಸ್ ಮಾಡಿದಾಗ ದ್ರಾವಿಡ್ ಕುಪಿತರಾಗಿ ನಿನಗೆ ವಯಸ್ಸೆಷ್ಟು ಎಂದು ಕೇಳಿ ಕೆಲಸದ ಮೇಲೆ ನಿಗಾ ವಹಿಸುವಂತೆ ಸಲಹೆ ಮಾಡಿದರು. ಬಳಿಕ ಕೋಣೆಯೊಳಗೆ ವ್ಯಕ್ತಿಯೊಬ್ಬ ಆಗಮಿಸಿ ಇದು ಎಂಟಿವಿ ಬಕ್ರಾದ ಕಾರ್ಯಕ್ರಮವಾಗಿದ್ದು, ಇದೊಂದು ತಮಾಷೆಗೆ ಮಾಡಿದ್ದು ಎಂದು ಹೇಳಿದಾಗ ದ್ರಾವಿಡ್ ನಿಟ್ಟುಸಿರು ಬಿಟ್ಟಿದ್ದರು.

Recent Comments

Leave Comments

footer
Top