Jai Kannada
Jai Kannada
Blog single photo
January 11, 2019

ಜಾಹೀರಾತಿಗೆ ಯುಪಿಎ ಖರ್ಚು ಮಾಡಿದ ಹಣ ಎನ್‌ಡಿಎಗಿಂತ ಹೆಚ್ಚು


ನವದೆಹಲಿ:ಕಾಂಗ್ರೆಸ್ ಮತ್ತು ಇತರೆ ಪ್ರತಿಪಕ್ಷಗಳು ಪ್ರಧಾನಿ ಮೋದಿ ಅವರ ಪ್ರತಿಯೊಂದು ಕ್ರಮವನ್ನೂ ವಿರೋಧಿಸಿ ವಾಗ್ದಾಳಿ ಮಾಡುತ್ತಿವೆ. ಮೋದಿ ಸರ್ಕಾರದ ವಿರುದ್ಧ ಆರೋಪಿಸದೇ ಒಂದು ನಿಮಿಷ ಕೂಡ ವಿರೋಧ ಪಕ್ಷಗಳು ವ್ಯರ್ಥ ಮಾಡುತ್ತಿಲ್ಲ..

ಇಂತಹ ಒಂದು ವಾಗ್ದಾಳಿಯಲ್ಲಿ ಬಿಜೆಪಿ ಸರ್ಕಾರ 5 ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರಕ್ಕಿಂತ ಜಾಹೀರಾತುಗಳಿಗೆ ಹೆಚ್ಚು ವೆಚ್ಚ ಮಾಡಿದೆ ಎಂದು ಆರೋಪಿಸುತ್ತಿದೆ. ಆದರೆ ದತ್ತಾಂಶಗಳು ಭಿನ್ನ ಕಥೆಯನ್ನು ಹೇಳುತ್ತವೆ. ಬಿಡುಗಡೆಯಾದ ದತ್ತಾಂಶದ ಪ್ರಕಾರ,  ಮುದ್ರಣ ಮಾಧ್ಯಮದಲ್ಲಿ 2014-15ರಿಂದ 2018ರವರೆಗೆ ಬಿಜೆಪಿ ಸರ್ಕಾರ ಖರೀದಿಸಿದ ಜಾಹೀರಾತು ಸ್ಥಳವು 460 ದಶಲಕ್ಷ ಸೆಮೀ ಆಗಿದ್ದರೆ, ಯುಪಿಎ ಸರ್ಕಾರ 560 ದಶಲಕ್ಷ ಜಾಹೀರಾತು ಸ್ಥಳವನ್ನು 2010 ಮತ್ತು 2014ರ ಅವಧಿಯಲ್ಲಿ ಖರೀದಿಸಿದೆ

ಎನ್‌ಡಿಎ ಸರ್ಕಾರ 2,156 .22 ಕೋಟಿ ರೂ.ಗಳನ್ನು ಜಾಹೀರಾತುಗಳಿಗೆ ನೀಡಿದ್ದರೆ ಯುಪಿಎ ಸರ್ಕಾರ 1896.73 ಕೋಟಿ ರೂ.ಗಳನ್ನು ಜಾಹೀರಾತುಗಳಿಗೆ ಖರ್ಚು ಮಾಡಿದೆ. ಹಾಗಾದರೆ ಎನ್‌ಡಿಎ ಸರ್ಕಾರ ಜಾಹೀರಾತುಗಳಿಗೆ ಹೆಚ್ಚು ಹಣ ಖರ್ಚು ಮಾಡಿದ್ದಾರೆಂಬ ನಿಮ್ಮ ಭಾವನೆ ತಪ್ಪು. 

. ಎನ್‌ಡಿಎ ಜಾಹೀರಾತುಗಳಿಗೆ ಖರ್ಚು ಮಾಡಿದ ಸಂದರ್ಭದಲ್ಲಿ ಅಂದರೆ 2014-18ರ ಅವಧಿಯಲ್ಲಿ ಜಾಹೀರಾತು ದರಗಳು ಏರಿಕೆಯಾಗಿತ್ತು.
ಯುಪಿಎ ಜಾಹೀರಾತಿಗೆ ಪಾವತಿ ಮಾಡಿದ ಹಣದ ಮೌಲ್ಯವನ್ನು ಈಗಿನ ದರಕ್ಕೆ ಅಳೆಯುವುದಾದರೆ ಯುಪಿಎ ಸರ್ಕಾರ ಖರ್ಚು ಮಾಡಿದ ಹಣ 2558 ಕೋಟಿ. ಇವು ಮುದ್ರಣ ಮಾಧ್ಯಮವನ್ನು ಮಾತ್ರ ಒಳಗೊಂಡಿದ್ದು ವಿದ್ಯುನ್ಮಾನ ಮತ್ತು ಡಿಜಿಟಲ್ ಮಾಧ್ಯಮ ಒಳಗೊಂಡಿಲ್ಲ.
 

Recent Comments

Leave Comments

footer
Top