• 20 March 2019 19:30
Jai Kannada
Jai Kannada
Blog single photo
January 11, 2019

ಅರಳಗೋಡು ಗ್ರಾಮದಲ್ಲಿ ಮನೆ ತೊರೆಯುತ್ತಿರುವ ಕುಟುಂಬಗಳು 


ಶಿವಮೊಗ್ಗ: ಶಿವಮೊಗ್ಗದ ಅರಳಗೋಡು ಗ್ರಾಮದಲ್ಲಿ ಮಂಗನ ಕಾಯಿಲೆ ಬಾಧೆ ಹಿನ್ನೆಲೆಯಲ್ಲಿ ಅನೇಕ ಕುಟುಂಬಗಳು ಮನೆಗಳನ್ನು ತೊರೆದುಹೋಗುತ್ತಿವೆ. ಮಣಿಪಾಲ್, ಸಾಗರ ಆಸ್ಪತ್ರೆಗಳಲ್ಲಿ 58 ಹೆಚ್ಚು ಜನರು ದಾಖಲಾಗಿದ್ದಾರೆ.

ಅರಳಗೋಡು ಗ್ರಾಮದಲ್ಲಿ ಈಗಾಗಲೇ 6 ಮಂದಿ ಮಂಗನಕಾಯಿಲೆಯಿಂದ ಮೃತಪಟ್ಟಿದ್ದಾರೆ. ಮಂಗನ ಕಾಯಿಲೆಗೆ ಒಂದೇ ಕುಟುಂಬದ ಇಬ್ಬರು ಮೃತಪಟ್ಟಿದ್ದು ಶೋಚನೀಯ ಸಂಗತಿಯಾಗಿದೆ. ಶ್ವೇತ ಎಂಬ 17 ವರ್ಷದ ಬಾಲಕಿ ಮಂಗನಕಾಯಿಗೆ ಬಲಿಯಾಗಿದ್ದಳು.

ನಿನ್ನೆ ಸಂಸದ ರಾಘವೇಂದ್ರ ಅರಳಗೋಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಂಗನಕಾಯಿಲೆ ಕರಾವಳಿಯ ಇತರೆ ಭಾಗಗಳಿಗೂ ಹರಡುವ ಭೀತಿ ತಲೆದೋರಿದೆ.

Recent Comments

Leave Comments

footer
Top