• 19 March 2019 05:18
Jai Kannada
Jai Kannada
Blog single photo
January 10, 2019

26/11 ಮುಂಬೈ ದಾಳಿ 'ಹೊಟೆಲ್ ಮುಂಬೈ' ಹೆಸರಲ್ಲಿ ಬೆಳ್ಳಿತೆರೆಗೆ

ಭಯಾನಕ 26/ 11 ಮುಂಬೈ ದಾಳಿ ನಡೆದು 10 ವರ್ಷಗಳು ಘಟಿಸಿವೆ. ಅದರಿಂದ ಉಂಟಾದ ಗಾಯಗಳಿನ್ನೂ ಮಾಗಿಲ್ಲ. ಈಗ ಹಿರಿಯ ನಟ ಅನುಮಪ್ ಖೇರ್ ಮತ್ತು ಅಕಾಡೆಮಿ ಪ್ರಶಸ್ತಿ ನಾಮಿನಿ ದೇವ್ ಪಟೇಲ್ ತಾಜ್ ಮಹಲ್ ಹೊಟೆಲ್ ಪ್ಯಾಲೇಸ್‌ ಮತ್ತು ಟವರ್‌ನಲ್ಲಿ ಆ ದುರ್ದಿನದಂದು ನಡೆದ ಘಟನೆಯನ್ನು ಹೊಟೆಲ್ ಮುಂಬೈ ಎಂಬ ಚಿತ್ರದ ಮೂಲಕ ಬೆಳ್ಳಿತೆರೆಗೆ ತರಲಿದ್ದಾರೆ.

ಆಂಥೋನಿ ಮಾರಸ್ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರವು 2009ರ ಸಾಕ್ಷ್ಯಚಿತ್ರ ಸರ್ವೈವಿಂಗ್ ಮುಂಬೈಯನ್ನು ಆಧರಿಸಿದೆ. ಉಗ್ರಗಾಮಿಗಳು ಮುತ್ತಿಗೆ ಹಾಕಿದ ಮಹತ್ವದ ಹೊಟೆಲ್ ಮೇಲಿನ ದಾಳಿಯ ಮೇಲೆ ಇದು ಮುಖ್ಯವಾಗಿ ಗಮನಹರಿಸಿದೆ. ತಾಜ್ ಸಿಬ್ಬಂದಿ ತಮ್ಮ ಅತಿಥಿಗಳನ್ನು ರಕ್ಷಿಸಲು ತೋರಿದ ಅನುಕರಣೀಯ ಶೌರ್ಯವನ್ನು ಅದರಲ್ಲಿ ಬಿಂಬಿಸಲಾಗಿದೆ.

ದೇವ್ ಪಟೇಲ್ ವೇಟರ್ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರದಲ್ಲಿ ದೇವ್ ಬಡಕುಟುಂಬದಿಂದ ಬಂದಿದ್ದು ಗರ್ಭಿಣಿ ಪತ್ನಿ ಮತ್ತು ಮಗು ಮನೆಯಲ್ಲಿ ಅವರಿಗೆ ಕಾಯುತ್ತಿದ್ದಾರೆ. ಭಯೋತ್ಪಾದಕರು ಆ ದುರ್ದಿನ ದಾಳಿ ಮಾಡಿದಾಗ, ಕುಟುಂಬವನ್ನು ಬದಿಗಿಟ್ಟು ಚೆಫ್ ಹೇಮಂತ್ ಒಬೆರಾಯ್ ( ಅನುಪಮ್ ಖೇರ್) ಜತೆಯಲ್ಲಿ  ಅತಿಥಿಗಳ ರಕ್ಷಣೆ ಮಾಡುವ ಹೊಣೆ ಹೊರುತ್ತಾರೆ. ಹೊಟೆಲ್ ಮುಂಬೈ ಚಿತ್ರವು ಇದೇ ಮಾರ್ಚ್‌ನಲ್ಲಿ ಮುಂಬೈನಲ್ಲಿ ಬಿಡುಗಡೆಯಾಗಲಿದೆ. 

 ಹೊಟೆಲ್ ಮುಂಬೈ ಟ್ರೇಲರ್ 

Recent Comments

Leave Comments

footer
Top