• 26 February 2020 23:52
Jai Kannada
Jai Kannada
Blog single photo
January 10, 2019

ಭಾರತದ ಮೊದಲ ಸ್ಪೇಸ್ ಫ್ಲೈಟ್‌ನಲ್ಲಿ ಮಹಿಳಾ ಗಗನಯಾನಿ?

ಭಾರತದ ಮೊದಲ ಬಾಹ್ಯಾಕಾಶ ಫ್ಲೈಟ್‌ 2021ರ ದ್ವಿತೀಯಾರ್ಧದಲ್ಲಿ ಉಡಾವಣೆಯಾಗುವ ಸಾಧ್ಯತೆಯಿದ್ದು, ಬಾಹ್ಯಾಕಾಶ ನೌಕೆಯಲ್ಲಿ ಕನಿಷ್ಠ ಒಬ್ಬರು ಮಹಿಳೆ ಇರುವ ಸಾಧ್ಯತೆಯಿದೆ.

ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಶಿವನ್ ಈ ಕುರಿತು ಹೇಳುತ್ತಾ, ಮಹಿಳಾ ಗಗನಯಾನಿಯನ್ನು ಸಕ್ರಿಯವಾಗಿ ಪರಿಗಣಿಸಲಾಗುತ್ತದೆ. ಆದರೆ ಆಯ್ಕೆಪ್ರಕ್ರಿಯೆಯ ಬಗ್ಗೆ ಮುಂಚಿತವಾಗಿ ಹೇಳುವುದಕ್ಕೆ ಆಗುವುದಿಲ್ಲ ಎಂದು ತಿಳಿಸಿದರು.

ಪ್ರಧಾನ ಮಂತ್ರಿ ಮಾನವ ಬಾಹ್ಯಾಕಾಶ ಯಾನದ ಪ್ರಸ್ತಾಪ ಮಾಡುವಾಗ ನಮ್ಮ  ಪುತ್ರರು ಅಥವಾ ಪುತ್ರಿಯರು ಯಾನದಲ್ಲಿ ತೆರಳುತ್ತಾರೆಂದು ತಿಳಿಸಿದ್ದರು. ಆದ್ದರಿಂದ ಮಹಿಳೆ ಕೂಡ ಯಾನದ ಭಾಗವಾಗಿದ್ದರೆ ಒಳ್ಳೆಯದು ಎಂದು ಆಶಿಸಿದರು.
ಇದುವರೆಗೆ 60 ಮಹಿಳೆಯರು ಬಾಹ್ಯಾಕಾಶ ಯಾನ ಮಾಡಿದ್ದು ಅವರ ಪೈಕಿ ಭಾರತೀಯ ಸಂಜಾತೆ ಕಲ್ಪನಾ ಚಾವ್ಲಾ ಕೂಡ ಸೇರಿದ್ದಾರೆ. ಕೊಲಂಬಿಯಾ ನೌಕೆಯ ಅಪಘಾತದಲ್ಲಿ ಚಾವ್ಲಾ 2003ರಲ್ಲಿ ಮೃತಪಟ್ಟಿದ್ದರು.

ಮಾನವ ಬಾಹ್ಯಾಕಾಶ ಯಾತ್ರೆಗೆ ಇಸ್ರೊ ಮೂರು ಗಗನಯಾನಿಗಳಿಗೆ ಸ್ಥಳಾವಕಾಶವಿರುವ ಬಾಹ್ಯಾಕಾಶ ನೌಕೆಯನ್ನು ನಿರ್ಮಿಸುತ್ತಿದೆ. ಇದು ಏಳು ದಿನಗಳವರೆಗೆ ಬಾಹ್ಯಾಕಾಶದಲ್ಲಿ ಉಳಿಯಬಲ್ಲದು ಎಂದು ಶಿವನ್ ಸುಳಿವು ನೀಡಿದ್ದಾರೆ.

Recent Comments

Leave Comments

footer
Top