• 19 March 2019 05:39
Jai Kannada
Jai Kannada
Blog single photo
January 10, 2019

ಶಬರಿಮಲೆಗೆ ಹೊರಟಿದ್ದ ಭಕ್ತ ಕಾಡಾನೆ ದಾಳಿಗೆ ಬಲಿ 

ಕೊಟ್ಟಾಯಂ: ಇಲ್ಲಿಂದ 60 ಕಿಮೀ ದೂರದ ಅರಣ್ಯ ಪ್ರದೇಶದಲ್ಲಿ ಶಬರಿಮಲೆ ಯಾತ್ರೆಗೆ ಹೊರಟಿದ್ದ ಭಕ್ತನೊಬ್ಬ ಕಾಡಾನೆಯ ದಾಳಿಗೆ ಬಲಿಯಾಗಿ ಮೃತಪಟ್ಟ ಆಘಾತಕಾರಿ ಘಟನೆ ಸಂಭವಿಸಿದೆ.

ಸೇಲಂನ 35 ವರ್ಷ ವಯಸ್ಸಿನ ಪರಮಶಿವಂ ಅವರು ತಮ್ಮ 7 ವರ್ಷದ ಪುತ್ರದ ಜತೆ ಇತರೆ 13 ಮಂದಿಯೊಂದಿಗೆ ತೆರಳುತ್ತಿದ್ದಾಗ ಗಂಡಾನೆಯೊಂದು ಗುಂಪಿನ ಮೇಲೆ ದಾಳಿ ಮಾಡಿತು. ಈ 13 ಜನರು ಎರುಮೆಲಿಯಿಂದ ಪಾಂಬಾದ ಅರಣ್ಯ ಮಾರ್ಗದಲ್ಲಿ ರಾತ್ರಿ 1 ಗಂಟೆ ಸುಮಾರಿಗೆ ನಡಿಗೆಯಲ್ಲಿ ಪ್ರಯಾಣಿಸುತ್ತಿದ್ದಾಗ ಆನೆ ದಾಳಿ ಮಾಡಿತು.

ಉಳಿದವರು ಆನೆಯ ದಾಳಿಯಿಂದ ಪಾರಾದರೂ ಪರಮಶಿವಂ ತನ್ನ ಭುಜದ ಮೇಲೆ ಮಗನನ್ನು ಕೂಡಿಸಿಕೊಂಡಿದ್ದರಿಂದ ಪರಾರಿಯಾಗಲು ಸಾಧ್ಯವಾಗಲಿಲ್ಲ. ಅವರ ಪುತ್ರ ತಪ್ಪಿಸಿಕೊಂಡರು ಪರಮಶಿವಂ ಆನೆಯ ದಾಳಿಗೆ ಬಲಿಯಾಗಿ ಪ್ರಾಣತೆತ್ತರು. 

 

Recent Comments

Leave Comments

footer
Top