Jai Kannada
Jai Kannada
Blog single photo
January 10, 2019

ಕ್ಯಾನ್ಸರ್‌ಗೆ ತುತ್ತಾದ ಪಾರಿಕ್ಕರ್ ಮುಖ್ಯಮಂತ್ರಿಯಾಗಿ ಮುಂದುವರಿಕೆ ನಾಚಿಕೆಗೇಡು: ವೆಲಿಂಕರ್  

ಪಣಜಿ: ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ತೀವ್ರ ಕಾಯಿಲೆಗೆ ಗುರಿಯಾಗಿದ್ದರೂ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸಿರುವುದು ನಾಚಿಕೆಗೇಡಿನ ವಿಚಾರ ಎದು ಗೋವಾದ ಮಾಜಿ ಆರ್‌ಎಸ್‌ಎಸ್ ಮುಖಂಡ ಸುಬಾಶ್ ವೆಲಿಂಕರ್ ತಿಳಿಸಿದ್ದಾರೆ. ಇದು ರಾಜ್ಯಕ್ಕೆ ಮತ್ತು ಜನತೆಗೆ ಹಾನಿಕರವಾಗಿದೆ ಎಂದೂ ಅವರು ಪ್ರತಿಪಾದಿಸಿದರು.

2 ವರ್ಷಗಳ ಹಿಂದೆ ಆರೆಸ್ಸೆಸ್ ಮುಖ್ಯಸ್ಥರ ಹುದ್ದೆಯಿಂದ ವಜಾಗೊಂಡಿದ್ದ ವೆಲಿಂಕರ್ ತೀವ್ರ ಕಾಯಿಲೆಗೆ ಗುರಿಯಾಗಿರುವ ಪಾರಿಕ್ಕರ್ ಗೋವಾದ ಆಡಳಿತ ನಿರ್ವಹಿಸುವುದು ನಾಚಿಕೆಗೇಡಿನ ವಿಚಾರ. ಅವರು ವಿಶ್ರಾಂತಿ ತೆಗೆದುಕೊಳ್ಳುವುದು ಸೂಕ್ತ ಎಂದು ವೆಲಿಂಕರ್ ಅಭಿಪ್ರಾಯಪಟ್ಟರು.

ಪಾರಿಕ್ಕರ್ ಅವರು ಮುಂದುವರಿದ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಕಳೆದ 11 ತಿಂಗಳಿಂದ ಗೋವಾ, ಮುಂಬೈ, ದೆಹಲಿ ಮತ್ತು ನ್ಯೂಯಾರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅವರ ಸುದೀರ್ಘ ಕಾಯಿಲೆಯ ನಡುವೆಯೂ ಅಧಿಕಾರದಲ್ಲಿರುವುದು ಆಡಳಿತ ಯಂತ್ರವನ್ನು ಕುಂಠಿತಗೊಳಿಸಿದೆ.
ಬಿಜೆಪಿ ಮಾತ್ರ ಪಾರಿಕ್ಕರ್ ರಾಜ್ಯವನ್ನು ಆಳಲು ಶಕ್ತರಾಗಿದ್ದಾರೆಂದು ಹೇಳುತ್ತಿದೆ.
ತಮ್ಮ ಗೋವಾ ಸುರಕ್ಷಾ ಮಂಚ್ ಪಕ್ಷವು ಬಿಜೆಪಿಗೆ ಪಾಠ ಕಲಿಸುತ್ತದೆ. ಇದು ನಂಬಿಕೆಗೆ ಅನರ್ಹವಾದ ಸರ್ಕಾರವಾಗಿದ್ದು, ಭೋದನಾ ಮಾಧ್ಯಮ, ಗಣಿಗಾರಿಕೆ ಆರಂಭ, ಕ್ಯಾಸಿನೋ ನಿಷೇಧ ಮುಂತಾದ ಪ್ರಮುಖ ವಿಚಾರಗಳಲ್ಲಿ ಮಾತು ತಪ್ಪಿಗದೆ ಎಂದು ವೆಲಿಂಕರ್ ತಿಳಿಸಿದರು.

Recent Comments

Leave Comments

footer
Top