• 24 March 2019 13:09
Jai Kannada
Jai Kannada
Blog single photo
January 10, 2019

10 ವರ್ಷಗಳ ಕಾಲ 123 ಕಾರ್ಖಾನೆಗಳಿಂದ 13 ಕೋಟಿ ರೂ. ತೆರಿಗೆ ವಂಚನೆ 

 ರಾಮನಗರ: ಕಂಪನಿಗಳು, ಕಾರ್ಖಾನೆಗಳು ಲಾಭದಲ್ಲಿ ನಡೆಯುತ್ತಿದ್ದರೂ ಅನೇಕ ಕಂಪನಿಗಳು  ಸುಳ್ಳು ಲೆಕ್ಕಪತ್ರಗಳನ್ನು ತೋರಿಸಿ ತೆರಿಗೆ ವಂಚಿಸುವುದು ಮಾಮೂಲಿಯಾಗಿದೆ. ಇದರಿಂದ ರಾಜ್ಯದ, ದೇಶದ ಬೊಕ್ಕಸಕ್ಕೆ ನಷ್ಟವಾಗುವುದಂತೂ ಖಚಿತ. ಆದರೆ 10 ವರ್ಷಗಳಿಂದ ಕಾರ್ಖಾನೆ ನಡೆಸುತ್ತಿದ್ದರೂ ಒಂದು ವರ್ಷವೂ ತೆರಿಗೆ ಕಟ್ಟದೇ ವಂಚಿಸುತ್ತಿರುವ 123 ಕಾರ್ಖಾನೆಗಳು ರಾಮನಗರದಲ್ಲಿವೆ. 

ರಾಮನಗರದಲ್ಲಿ 10 ವರ್ಷಗಳಿಂದ 123 ಕಾರ್ಖಾನೆಗಳು ತೆರಿಗೆ ಪಾವತಿಸದಿದ್ದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಹೇಳಲಾಗುತ್ತಿದೆ. 197 ಕಾರ್ಖಾನೆಗಳಲ್ಲಿ 123 ಕಾರ್ಖಾನೆಗಳು ತೆರಿಗೆ ವಂಚನೆ ಮಾಡುತ್ತಿವೆ.

ರಾಮನಗರ ಮಂಚನಾಯಕನಹಳ್ಳಿ ಗ್ರಾಂ. ಪಂಚಾಯಿತಿ ವ್ಯಾಪ್ತಿಯ ಕಾರ್ಖಾನೆಗಳು ತೆರಿಗೆ ವಂಚಿಸಿರುವ ಬಗ್ಗೆ ಗ್ರಾಮ ಪಂಚಾಯಿತಿ ನೋಟಿಸ್ ನೀಡಿದೆ. ಈ ಕುರಿತು ಗ್ರಾಮ ಪಂಚಾಯತ್, ಪಿಡಿಒ ಸಿಎಂ ಗಮನಕ್ಕೂ ತಂದಿದ್ದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. 

........

Recent Comments

Leave Comments

footer
Top